Publish Date: Mon, 02 Dec 2019 (09:39 IST)
Updated Date: Mon, 02 Dec 2019 (09:40 IST)
ಮುಂಬೈ: ಟೀಂ ಇಂಡಿಯಾದಲ್ಲಿ ಹಿರಿಯ ಆಟಗಾರರ ಸಾಲಿಗೆ ಇಶಾಂತ್ ಶರ್ಮಾ ಕೂಡಾ ಸೇರ್ಪಡೆಯಾಗುತ್ತಾರೆ. ಆದರೆ ಹಿರಿಯನಾಗಿದ್ದರೂ ಇವರು ಜ್ಯೂನಿಯರ್ ಗಳಿಂದಲೂ ಹೆಚ್ಚು ತಮಾಷೆಗೊಳಗಾಗುತ್ತಾರಂತೆ.
ಹೀಗಂತ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಹಿರಂಗಪಡಿಸಿದ್ದಾರೆ. ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕೊಹ್ಲಿ ತಮ್ಮ ತಂಡದ ಹಲವು ವಿಚಾರಗಳನ್ನು ಹೇಳಿಕೊಂಡಿದ್ದಾರೆ.
‘ತಂಡದಲ್ಲಿ ಹೆಚ್ಚು ಕಾಲೆಳೆಸಿಕೊಳ್ಳುವುದು ಇಶಾಂತ್ ಶರ್ಮಾ. ಇನ್ನು, ಜಸ್ಪ್ರೀತ್ ಬುಮ್ರಾ ನಾಚಿಕೆ ಸ್ವಭಾವದವರು, ಹಾಗಿದ್ದರೂ ಜೋಕ್ ಮಾಡುತ್ತಿರುತ್ತಾರೆ. ಭುವನೇಶ್ವರ್ ಕುಮಾರ್ ಉತ್ತರ ಪ್ರದೇಶದವರಲ್ವಾ? ಯಾವತ್ತೂ ತಮಾಷೆ ಮಾಡುತ್ತಿರುತ್ತಾರೆ. ಮೊಹಮ್ಮದ್ ಶಮಿ ಯಾವತ್ತೂ ಉಮೇಶ್ ಯಾದವ್ ಜತೆಗೇ ಇರುತ್ತಾರೆ’ ಎಂದು ಕೊಹ್ಲಿ ತಮಾಷೆಯಾಗಿ ಹೇಳಿಕೊಂಡಿದ್ದಾರೆ.