Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾದಲ್ಲಿ ಅತ್ಯಂತ ವೇಗದ ಸರದಾರ ಯಾರು ಗೊತ್ತಾ?! ವಿರಾಟ್ ಕೊಹ್ಲಿಯಂತೂ ಅಲ್ಲ!

ವಿರಾಟ್ ಕೊಹ್ಲಿ
ಮುಂಬೈ: ಟೀಂ ಇಂಡಿಯಾದಲ್ಲಿ ಫಿಟ್ನೆಸ್ ವಿಚಾರಕ್ಕೆ ಬಂದರೆ ವಿರಾಟ್ ಕೊಹ್ಲಿಯನ್ನು ಮೀರಿಸುವ ಆಟಗಾರನಿರೋದಿಲ್ಲ. ಆದರೆ ನೆಟ್ ಪ್ರಾಕ್ಟೀಸ್ ಸಂದರ್ಭದಲ್ಲಿ ಅತ್ಯಂತ ವೇಗವಾಗಿ ಓಡುವ ವೇಗದ ಸರದಾರ ಯಾರು ಗೊತ್ತಾ? ಇದಕ್ಕೆ ಕೊಹ್ಲಿಯೇ ಉತ್ತರ ನೀಡಿದ್ದಾರೆ.


ವಿರಾಟ್ ಕೊಹ್ಲಿ ಪ್ರಕಾರ ಟೀಂ ಇಂಡಿಯಾದಲ್ಲಿ ಅತ್ಯಂತ ವೇಗವಾಗಿ ಓಡುವ ಆಟಗಾರನೆಂದರೆ ರವೀಂದ್ರ ಜಡೇಜಾ. ಓಟದಲ್ಲಿ ಅವರನ್ನು ಮೀರಿಸುವವರೇ ಇಲ್ಲ ಎಂದು ಕೊಹ್ಲಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

‘ಗುಂಪಾಗಿ ಪ್ರಾಕ್ಟೀಸ್ ಮಾಡಲು ತುಂಬಾ ಖುಷಿಯಾಗುತ್ತದೆ. ಆದರೆ ಜಡ್ಡು ಗುಂಪಿನಲ್ಲಿ ಇರುವಾಗ ಆತನನ್ನು ಓಟದಲ್ಲಿ ಸೋಲಿಸುವವರೇ ಇಲ್ಲ’ ಎಂದು ಕೊಹ್ಲಿ ಹೊಗಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಂಗೂಲಿ ಗುಣಗಾನ ಮಾಡಿದ್ದಕ್ಕೆ ವಿರಾಟ್ ಕೊಹ್ಲಿ ಮೇಲೆ ಸುನಿಲ್ ಗವಾಸ್ಕರ್ ಸಿಟ್ಟು