Publish Date: Mon, 02 Dec 2019 (10:05 IST)
Updated Date: Mon, 02 Dec 2019 (10:06 IST)
ಮುಂಬೈ: ವಿಶ್ವಕಪ್ ಮುಗಿದ ಬಳಿಕ ಮೈದಾನಕ್ಕಿಳಿಯದ ಹಿರಿಯ ವಿಕೆಟ್ ಕೀಪರ್ ಧೋನಿ ಬಗ್ಗೆ ಪ್ರಶ್ನೆಗೆ ಉತ್ತರಿಸಿ ಬಹುಶಃ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೂ ಸಾಕಾಗಿರಬೇಕು. ಅದಕ್ಕೇ ಅವರು ನಿನ್ನೆ ಪತ್ರಕರ್ತರು ಈ ಬಗ್ಗೆ ಪ್ರಶ್ನಿಸಿದಾಗ ಕೊಂಚ ಅಸಮಾಧಾನಗೊಂಡರು.
ಬಿಸಿಸಿಐ ಸಭೆ ಬಳಿಕ ಗಂಗೂಲಿಗೆ ಧೋನಿ ಯಾವಾಗ ಮತ್ತೆ ಕ್ರಿಕೆಟ್ ಆಡ್ತಾರೆ? ಅವರು ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾಗೆ ವಾಪಸ್ ಆಗ್ತಾರಾ ಎಂದು ಪತ್ರಕರ್ತರು ಕೇಳಿದರು.
ಇದಕ್ಕೆ ಕೊಂಚ ಸಿಡಿಮಿಡಿಗೊಂಡ ಗಂಗೂಲಿ ‘ದಯವಿಟ್ಟು ಧೋನಿಯನ್ನೇ ಕೇಳಿ’ ಎಂದು ಉತ್ತರಿಸಿದ್ದಾರೆ. ಈ ಮೂಲಕ ಈ ವಿಚಾರವನ್ನು ಇನ್ನೂ ಹೆಚ್ಚು ಚರ್ಚೆ ಮಾಡಲು ತಮಗಿಷ್ಟವಿಲ್ಲ ಎಂದು ಸೂಚಿಸಿದ್ದಾರೆ.