Select Your Language

Notifications

webdunia
webdunia
webdunia
webdunia

ಹೆಂಡತಿಯನ್ನು ಖುಷಿಯಾಗಿಡಲು ಧೋನಿ ಹೇಳಿದ ಆ ಟ್ರಿಕ್ ಏನು ಗೊತ್ತಾ?

webdunia
ಗುರುವಾರ, 28 ನವೆಂಬರ್ 2019 (09:12 IST)
ರಾಂಚಿ: ಧೋನಿ ಮತ್ತು ಸಾಕ್ಷಿ ಸಿಂಗ್ ಹ್ಯಾಪೀ ಮ್ಯಾರೀಡ್ ಕಪಲ್ ಎನ್ನುವುದರಲ್ಲಿ ಸಂಶಯವಿಲ್ಲ. ಇಂತಿಪ್ಪ ಧೋನಿ ಮದುವೆಯಾದ ಮೇಲೆ ಹೆಂಡತಿಯನ್ನು ಖುಷಿಯಾಗಿಡುವುದು ಹೇಗೆ ಎಂದು ಟಿಪ್ಸ್ ಹೇಳಿದ್ದಾರೆ.


ಸಾಮಾನ್ಯವಾಗಿ ಧೋನಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಎಲ್ಲಿಯೂ ಮಾತಾಡುವುದಿಲ್ಲ. ಆದರೆ ಕಾರ್ಯಕ್ರಮವೊಂದರಲ್ಲಿ ಅವರು ಈ ರೀತಿ ತಮಾಷೆಯಾಗಿ ಜೀವನದಲ್ಲಿ ಖುಷಿಯಾಗಿರುವುದರ ಲಾಜಿಕ್ ಹೇಳಿದ್ದಾರೆ.

‘ಮದುವೆಗೆ ಮೊದಲು ಎಲ್ಲಾ ಪುರುಷರ ಹುಲಿಯ ಹಾಗಿರ್ತಾರೆ. ಆದರೆ ಮದುವೆಯಾದ ಮೇಲೆಯೇ ಜೀವನ ಗೊತ್ತಾಗುವುದು. ಅದರಲ್ಲೂ 55 ವರ್ಷ ದಾಟಿದ ಮೇಲೆ ಜೀವನದ ನಿಜ ಸಾರ ಅರಿವಾಗುತ್ತದೆ. ಹಾಗಾಗಿ ನಾನು ನನ್ನ ಹೆಂಡತಿ ಏನೆಲ್ಲಾ ಮಾಡಲು ಬಯಸುತ್ತಾಳೋ ಅದೆಲ್ಲದಕ್ಕೂ ಒಪ್ಪಿಗೆ ನೀಡಿದ್ದೇನೆ. ಅವಳಿಗೆ ಹೇಗೆ ಇರಲು ಇಷ್ಟವೋ ಹಾಗೆ ಇರಲಿ. ನನ್ನ ಹೆಂಡತಿ ಖುಷಿಯಾಗಿದ್ದರೆ, ನಾನೂ ಖುಷಿಯಾಗಿರಬಹುದು’ ಎಂದು ಧೋನಿ ಕಾರ್ಯಕ್ರಮವೊಂದರಲ್ಲಿ ಒಳ್ಳೆಯ ಟಿಪ್ಸ್ ಕೊಟ್ಟಿದ್ದಾರೆ.

Share this Story:

Follow Webdunia Hindi

ಮುಂದಿನ ಸುದ್ದಿ

ಪುತ್ರನ ಹೆಸರಲ್ಲಿ ನಕಲಿ ಟ್ವಿಟರ್ ಖಾತೆ: ದೂರು ನೀಡಿದ ಸಚಿನ್ ತೆಂಡುಲ್ಕರ್