ನಿನ್ನೆ ರಾತ್ರಿ ಸೈಯದ್ ಮುಷ್ತಾಕ್ ಅಲಿ ಟಿ20 ಫೈನಲ್ ಆಡಿದ್ದ ಮನೀಶ್ ಪಾಂಡೆಗೆ ಇಂದು ವಿವಾಹ ಸಂಭ್ರಮ!

ಸೋಮವಾರ, 2 ಡಿಸೆಂಬರ್ 2019 (10:28 IST)
ಮುಂಬೈ: ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ನಾಯಕ ಮನೀಶ್ ಪಾಂಡೆಗೆ ಸಂಭ್ರಮಿಸಲು ಮತ್ತೊಂದು ಕಾರಣ ಸಿಕ್ಕಿದೆ.


ತಮ್ಮ ತಂಡ ಸತತ ಎರಡನೇ ಬಾರಿಗೆ ಚಾಂಪಿಯನ್ ಆದ ಖುಷಿಯಲ್ಲಿರುವ ಮನೀಶ್ ಇದೀಗ ವಿವಾಹ ಜೀವನಕ್ಕೆ ಕಾಲಿಡುತ್ತಿದ್ದಾರೆ. ತಮ್ಮ ವಿವಾಹಕ್ಕಾಗಿ ಪಂದ್ಯ ಮುಗಿದ ಕೂಡಲೇ ಮುಂಬೈಗೆ ಬಂದಿಳಿದಿದ್ದಾರೆ.

ಇಂದು ತಮ್ಮ ಗೆಳತಿ, ನಟಿ ಆಶ್ರಿತಾ ಶೆಟ್ಟಿ ಜತೆಗೆ ಮನೀಶ್ ವಿವಾಹವಾಗುತ್ತಿದ್ದಾರೆ. ಹೀಗಾಗಿ ಪಂದ್ಯ ಮುಗಿದ ತಕ್ಷಣವೇ ಅವರು ಮುಂಬೈ ವಿಮಾನವೇರಿದ್ದಾರೆ. ಈ ಬಗ್ಗೆ ಪಂದ್ಯ ಮುಗಿದ ಬಳಿಕ ಸಂಭ್ರಮದಿಂದಲೇ ಮನೀಶ್ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಎಲ್ಲವನ್ನೂ ಧೋನಿಗೇ ಕೇಳಿ! ಪತ್ರಕರ್ತರ ಮುಂದೆ ಗಂಗೂಲಿ ನೇರನುಡಿ