Publish Date: Wed, 10 Apr 2019 (10:45 IST)
Updated Date: Wed, 10 Apr 2019 (10:46 IST)
ಬೆಂಗಳೂರು : ಲೋಕಸಭಾ ಚುನಾವಣೆ ದಿನ ಮತದಾನ ಮಾಡದೆ ಔಟಿಂಗ್ ಹೋಗುವವವರಿಗೆ ಐಟಿ ಕಂಪನಿಗಳು ಭರ್ಜರಿ ಶಾಕ್ ಕೊಟ್ಟಿದೆ.
ಸಾಮಾನ್ಯವಾಗಿ ಚುನಾವಣೆ ಸಮಯದಲ್ಲಿ ಆಯೋಗದ ಸೂಚನೆಯಂತೆ ವೇತನ ಸಹಿತ ರಜೆ ನೀಡಲಾಗುತ್ತದೆ. ಆದರೆ ಬೆಂಗಳೂರಿನ ಮತದಾನದ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ಐಟಿ ಕಂಪನಿಗಳಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಬಹುತೇಕ ಬೆಂಗಳೂರಿನ ಐಟಿ ಕಂಪನಿಗಳು ಮಹತ್ವದ ನಿರ್ಧಾರ ಕೈಗೊಂಡಿವೆ.
ಈ ಬಾರಿ ಐಟಿ ಕಂಪನಿಗಳು ಸಂಬಳ ಸಿಗಬೇಕಾದರೇ ಮತದಾನದ ಮಾಡಿರುವುದಕ್ಕೆ ಹೆಚ್.ಆರ್ ಗಳಿಗೆ ಪಕ್ಕಾ ಪ್ರೂಫ್ ನೀಡಬೇಕು ಎಂಬುದಾಗಿ ಕಂಡೀಷನ್ ಹಾಕಿದೆ. ಇನ್ಸೋಸಿಸ್ ಸೇರಿದಂತೆ ಅನೇಕ ಸಂಸ್ಥೆಗಳು ಈಗಾಗಲೇ ಸಿಬ್ಬಂದಿಗೆ ಈ ಬಗ್ಗೆ ಸೂಚನೆಯನ್ನು ಕೊಟ್ಟಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.