Select Your Language

Notifications

webdunia
webdunia
webdunia
webdunia

ಅಂಬರೀಶ್ ಅಣ್ಣಂಗೆ ಒಬ್ಳೇ ಹೆಂಡ್ತಿ ಎಂದು ಟಾಂಗ್ ಕೊಟ್ಟ ನಟ ಯಶ್

ಅಂಬರೀಶ್ ಅಣ್ಣಂಗೆ ಒಬ್ಳೇ ಹೆಂಡ್ತಿ ಎಂದು ಟಾಂಗ್ ಕೊಟ್ಟ ನಟ ಯಶ್
ಮಂಡ್ಯ , ಬುಧವಾರ, 10 ಏಪ್ರಿಲ್ 2019 (08:21 IST)
ಮಂಡ್ಯ: ಮಂಡ್ಯ ಚುನಾವಣಾ ರಣ ಕಣ ರಂಗೇರಿದ್ದು, ಆರೋಪ ಪ್ರತ್ಯಾರೋಪಗಳು ಜೋರಾಗಿ ನಡೆದಿವೆ. ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸುಮಲತಾ ಪರ ಪ್ರಚಾರ ಮಾಡುತ್ತಿರುವ ನಟ ರಾಕಿಂಗ್ ಸ್ಟಾರ್ ಯಶ್ ಎದುರಾಳಿಗಳಿಗೆ ಭರ್ಜರಿ ತಿರುಗೇಟು ಕೊಟ್ಟಿದ್ದಾರೆ.


ಸುಮಲತಾ ಹೆಸರಿನ ಮೂವರು ಮಂಡ್ಯದಲ್ಲಿ ಕಣಕ್ಕಿಳಿದಿರುವ ವಿಚಾರದ ಬಗ್ಗೆ ಖಾಸಗಿ ವಾಹಿನಿ ಸಂದರ್ಶನದಲ್ಲಿ ಪ್ರಶ್ನೆ ಕೇಳಿದ್ದಕ್ಕೆ ಯಶ್ ಜನ ಮುಠ್ಠಾಳರಲ್ಲ. ಅವರಿಗೆ ಎಲ್ಲಾ ಅರ್ಥವಾಗುತ್ತದೆ. ಯಾಕೆಂದರೆ ಅಂಬರೀಶ್ ಅಣ್ಣಂಗೆ ಇರೋದು ಒಬ್ಳೇ ಹೆಂಡ್ತಿ. ಹಾಗಾಗಿ ಜನ ಕನ್ ಫ್ಯೂಸ್ ಆಗಲ್ಲ ಎಂದು ಎದುರಾಳಿಗಳಿಗೆ ತಿರುಗೇಟು ಕೊಟ್ಟಿದ್ದಾರೆ.

ಅಲ್ಲದೆ, ನಮಗೆ ಅನುಭವ ಇಲ್ಲದಿರಬಹುದು. ಇದೆಲ್ಲಾ ಹೊಸದು ಇರಬಹುದು. ಆದರೆ ರಾಜಕೀಯದಲ್ಲಿ ಈ ರೀತಿ ಆರೋಪಗಳು, ಪ್ರತ್ಯಾರೋಪಗಳು ಸಾಮಾನ್ಯ. ಅದಕ್ಕೆಲ್ಲಾ ತಿರುಗೇಟು ಕೊಡುತ್ತಾ ಸಮಯ ಹಾಳು ಮಾಡಿಕೊಳ್ಳಲ್ಲ ಎಂದು ಯಶ್ ತಮ್ಮದೇ ಶೈಲಿಯಲ್ಲಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ನಿರ್ಮಾಪಕ ಪುನೀತ್ ರಾಜ್ ಕುಮಾರ್ ಗೆ ನಾಡಿದ್ದು ಮೊದಲ ಅಗ್ನಿಪರೀಕ್ಷೆ