Publish Date: Tue, 09 Apr 2019 (10:41 IST)
Updated Date: Tue, 09 Apr 2019 (10:43 IST)
ಮಂಡ್ಯ: ಲೋಕಸಭಾ ಚುನಾವಣಾ ಕಣ ರಂಗೇರಿದ್ದು, ಆರೋಪಗಳು ಪ್ರತ್ಯಾರೋಪಗಳು ಜೋರಾಗಿ ನಡೆದಿದೆ. ಮಂಡ್ಯದಲ್ಲಿ ಸುಮಲತಾ ಪರ ಪ್ರಚಾರ ನಡೆಸುತ್ತಿರುವ ರಾಕಿಂಗ್ ಸ್ಟಾರ್ ಯಶ್ ವಿರುದ್ಧ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಟೀಕಾ ಪ್ರಹಾರ ನಡೆಸಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಬಾಡಿಗೆ ಮನೆ ವಿವಾದದ ಬಗ್ಗೆ ಕೆಣಕಿ ನಿಖಿಲ್ ಮಾತನಾಡಿದ್ದು, ಮನೆ ಬಾಡಿಗೆ ಕಟ್ಟದವರು ನಮ್ಮ ಯೋಗ್ಯತೆ ಬಗ್ಗೆ ಮಾತನಾಡುತ್ತಾರೆ ಎಂದು ಗುಡುಗಿದ್ದಾರೆ.
ಯಶ್ ಬಾಡಿಗೆ ಮನೆ ವಿವಾದ ಕೋರ್ಟ್ ನಲ್ಲಿದೆ. ಮನೆ ಮಾಲಿಕರು ಮತ್ತು ಯಶ್ ತಾಯಿ ನಡುವಿನ ಕೋರ್ಟು ಜಟಾಪಟಿ ಬಗ್ಗೆ ನಿಖಿಲ್ ಲೇವಡಿ ಮಾಡಿದ್ದಾರೆ. ನಿನ್ನೆಯ ರೋಡ್ ಶೋನಲ್ಲಿ ಸುಮಲತಾ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ್ದ ನಿಖಿಲ್, ಅವರು ಸುಳ್ಳು ಹೇಳುವುದು, ಭಾವನಾತ್ಮಕವಾಗಿ ಮಾತನಾಡಿ ಜನರನ್ನು ಮರುಳು ಮಾಡುತ್ತಿದ್ದಾರೆ ಎಂದಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ