Publish Date: Tue, 09 Apr 2019 (10:04 IST)
Updated Date: Tue, 09 Apr 2019 (10:05 IST)
ಮಂಡ್ಯ: ಯುಗಾದಿ ಹಬ್ಬದ ನಿಮಿತ್ತ ಚುನಾವಣಾ ಪ್ರಚಾರದಿಂದ ಎರಡು ದಿನ ಹಿಂದೆ ಸರಿದಿದ್ದ ರಾಕಿಂಗ್ ಸ್ಟಾರ್ ಯಶ್ ಮತ್ತು ದರ್ಶನ್ ಇಂದಿನಿಂದ ಮತ್ತೆ ಪ್ರಚಾರ ಶುರು ಮಾಡಲಿದ್ದಾರೆ.
ದರ್ಶನ್ ನಿನ್ನೆಯೇ ಬೆಂಗಳೂರು ಸೆಂಟ್ರಲ್ ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್ ಪರ ಬೆಂಗಳೂರಿನಲ್ಲಿ ಪ್ರಚಾರ ನಡೆಸಿದ್ದರು. ಆದರೆ ಇಂದಿನಿಂದ ಮಂಡ್ಯದಲ್ಲಿ ಸುಮಲತಾ ಪರ ಪ್ರಚಾರ ನಡೆಸಲಿದ್ದಾರೆ.
ಯಶ್ ಮತ್ತು ದರ್ಶನ್ ಇಂದು ಮಂಡ್ಯದ ಹಲವೆಡೆ ರೋಡ್ ಶೋ ನಡೆಸಿ ಪ್ರಚಾರ ನಡೆಸಲಿದ್ದಾರೆ. ಇನ್ನೊಂದೆಡೆ ಮಳವಳ್ಳಿ ಸುತ್ತಮುತ್ತ ಜೆಡಿಎಸ್ ನಿಖಿಲ್ ಕುಮಾರಸ್ವಾಮಿ ಕೂಡಾ ಪ್ರಚಾರ ನಡೆಸಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ