Publish Date: Wed, 10 Apr 2019 (07:40 IST)
Updated Date: Wed, 10 Apr 2019 (07:41 IST)
ಬೆಂಗಳೂರು: ಮನೆ ಬಾಡಿಗೆ ಕಟ್ಟಲು ಯೋಗ್ಯತೆ ಇಲ್ಲದವರು ನಮ್ಮ ಬಗ್ಗೆ ಮಾತನಾಡುತ್ತಾರೆ ಎಂದು ರಾಕಿಂಗ್ ಸ್ಟಾರ್ ಯಶ್ ವಿರುದ್ಧ ಟೀಕೆ ಮಾಡಿದ್ದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಯಶ್ ತಿರುಗೇಟು ನೀಡಿದ್ದಾರೆ.
ಸುಮಲತಾ ಅಂಬರೀಶ್ ಪರ ಪ್ರಚಾರ ನಡೆಸುತ್ತಿರುವ ಯಶ್ ಪ್ರಚಾರದ ನಡುವೆ ತಮಗೆ ಟಾಂಗ್ ಕೊಟ್ಟ ಎದುರಾಳಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ತಿರುಗೇಟು ಕೊಟ್ಟಿದ್ದಾರೆ.
‘ಹೌದು ನಮಗೆ ಮನೆ ಬಾಡಿಗೆ ಕಟ್ಟಲು ಆಗಲಿಲ್ಲ. ಆ ಹಣವನ್ನು ಉತ್ತರ ಕರ್ನಾಟಕದಲ್ಲಿ ನೀರಿಲ್ಲದೇ ಒದ್ದಾಡುತ್ತಿದ್ದವರಿಗೆ ನೀರು ಕೊಡಿಸಲು ಕೊಟ್ಟಿದ್ದೀವಿ. ಸರ್ಕಾರ ಏನೂ ಮಾಡಲಿಲ್ಲ. ಅದಕ್ಕೇ ನಾವು ದುಡಿದ ಸ್ವಂತ ದುಡ್ಡಿನಿಂದ ಈ ಕೆಲಸ ಮಾಡಿದೆವು’ ಎಂದು ಟಾಂಗ್ ಕೊಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ