Select Your Language

Notifications

webdunia
webdunia
webdunia
webdunia

ಕೇಂದ್ರದಲ್ಲಿ ಅತಂತ್ರ ಸರಕಾರ: ಭವಿಷ್ಯ ನುಡಿದೋರಾರು?

ಕೇಂದ್ರದಲ್ಲಿ ಅತಂತ್ರ ಸರಕಾರ: ಭವಿಷ್ಯ ನುಡಿದೋರಾರು?
ಬೆಂಗಳೂರು , ಮಂಗಳವಾರ, 9 ಏಪ್ರಿಲ್ 2019 (19:10 IST)
ಎಲ್ಲದನ್ನು ನಾನೇ ಮಾಡಿದ್ದು ಎಂದು ಹೇಳುವ ಕೆಟ್ಟ ದುರುದ್ದೇಶವನ್ನು ಪ್ರಧಾನಿ ನರೇಂದ್ರ ಮೋದಿ ಇಟ್ಟುಕೊಂಡಿದ್ದಾರೆ.  ಚುನಾವಣೆಯ ಈ ಬಾರಿಯ ಸಮೀಕ್ಷೆಗಳನ್ನು ನೋಡಿದರೆ ಅತಂತ್ರ ಸ್ಥಿತಿ ಬರುತ್ತೆ ಎಂಬುದು ವ್ಯಕ್ತವಾಗಿದೆ. ಹೀಗಂತ ಮಾಜಿ ಪ್ರಧಾನಿ ಹೇಳಿದ್ದಾರೆ.

ಕೃಷ್ಣ ಭೈರೇಗೌಡ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ.  ಕೇಂದ್ರದಲ್ಲಿ ಐದು ವರ್ಷ ಮೋದಿ ಏನು ಮಾಡಿದ್ದಾರೆ ಎಂಬುದನ್ನ ವಿಮರ್ಶೆ ಮಾಡಬೇಕು. ಅವರು ಕೊಟ್ಟಂತಹ ಆಶ್ವಾಸನೆ ಏನು, ಅವು ಎಷ್ಟರ ಮಟ್ಟಿಗೆ ಈಡೇರಿವೆ ಎಂಬುದನ್ನು ತಿಳಿದುಕೊಳ್ಳಬೇಕು. ಕಳೆದ ಬಾರಿ 295 ಸ್ಥಾನಗಳನ್ನು‌ಬಿಜೆಪಿ ಪಡೆದಿತ್ತು.  ಈ ಬಾರಿ ಅಷ್ಟು ಸ್ಥಾನ ಬರಲ್ಲ ಎಂಬುದು ಗೊತ್ತಾಗಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹೇಳಿದ್ದಾರೆ. ಮೋದಿ ಎಲೆಕ್ಷನ್ ಗಾಗಿಯೇ  ಪುಲ್ವಾಮಾ ಘಟನೆಗೆ ಮತ್ತೊಂದು ಸ್ವರೂಪ ಕೊಟ್ರು.

ಐದು ವರ್ಷದಲ್ಲಿ ದೇಶದ ರಕ್ಷಣೆಗೆ ಬೇಕಾದ ಸಾಮಾಗ್ರಿಗಳನ್ನ ಜೋಡಿಸಿದ್ದೇನೆ. ರಷ್ಯಾ ಚೈನಾ ಗಿಂತ ‌ಮುಂದೆ ಹೋಗಿದ್ದೇನೆ. ಆಕಾಶದಲ್ಲಿ ಯುದ್ಧ ಮಾಡುತ್ತೇವೆ ಎಂಬ ಮಾತುಗಳನ್ನಾಡುತ್ತಾರೆ ಎಂದು ಟೀಕೆ ಮಾಡಿದ್ರು.



Share this Story:

Follow Webdunia kannada

ಮುಂದಿನ ಸುದ್ದಿ

ಎಂಪಿ, ಎಂಎಲ್ಎ, ಪಂಚಾಯಿತಿ ಮೆಂಬರ್ ಎಲ್ಲಾ ನಾನೇ…!