Select Your Language

Notifications

webdunia
webdunia
webdunia
Tuesday, 8 April 2025
webdunia

ಎಚ್.ಡಿ ದೇವೇಗೌಡರ ಕುಟುಂಬ ಏತಕ್ಕಾಗಿ ಕಣ್ಣೀರು ಹಾಕ್ತಾರೆ- ಕೆ.ಎಸ್ ಈಶ್ವರಪ್ಪ ಕಿಡಿ

ಬಾಗಲಕೋಟೆ
ಬಾಗಲಕೋಟೆ , ಮಂಗಳವಾರ, 9 ಏಪ್ರಿಲ್ 2019 (14:27 IST)
ಬಾಗಲಕೋಟೆ : ಬಿಜೆಪಿ ಮುಖಂಡ ಕೆ.ಎಸ್ ಈಶ್ವರಪ್ಪ ಅವರು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಕುಟುಂಬ ಕಾರ್ಯಕ್ರಮಗಳಲ್ಲಿ  ಏತಕ್ಕಾಗಿ ಕಣ್ಣೀರು ಹಾಕ್ತಾರೆ ಎಂದು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದ್ದಾರೆ.


ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ದೇವೇಗೌಡರು, ಕುಮಾರಸ್ವಾಮಿ, ರೇವಣ್ಣ, ಪ್ರಜ್ವಲ್, ಇವ್ರೆಲ್ಲ ಪುಲ್ವಾಮಾ ಸೈನಿಕರ ಸಾವಿಗಾಗಿ ಕಣ್ಣೀರು ಹಾಕಿದ್ರಾ?, ರಾಜ್ಯದಲ್ಲಿ ಬರಕ್ಕೆ ಸಿಕ್ಕಿ ಕಂಗಾಲಾಗಿರೋ ರೈತರಿಗಾಗಿ ಕಣ್ಣೀರು ಬಂತಾ? ಅಥವಾ ಐಟಿ ದಾಳಿಯಲ್ಲಿ ಸಿಕ್ಕಿಹಾಕಿಕೊಂಡ್ರು ಅಂತ ಕಣ್ಣೀರು ಬಂತಾ? ಹೀಗೆ ಯಾವ ವಿಷಯಕ್ಕೆ ಕಣ್ಣೀರು ಹಾಕ್ತಾರೆ ಎಂದು ದೇವೇಗೌಡರೇ ಸ್ಪಷ್ಟಪಡಿಸಬೇಕು ಎಂದು ಪ್ರಶ್ನಿಸಿದ್ದಾರೆ.


ಅಲ್ಲದೇ ದೇವೇಗೌಡರು ನಮ್ಮದು ಕುಟುಂಬ ರಾಜಕಾರಣ ಅಲ್ಲ ಅಂತಾರೆ, ಆದರೆ ಲೋಕಸಭೆ ಚುನಾವಣೆಗೆ ದೇವೇಗೌಡರು ಹಾಗೂ ಅವರ ಇಬ್ಬರು ಮೊಮ್ಮಕ್ಕಳು ನಿಂತಿದ್ದಾರೆ. ಇನ್ನೊಬ್ಬ ಮಗ ಸಚಿವ,ಸೊಸೆ ಶಾಸಕಿ, ಹೀಗಾಗಿ ಕುಟುಂಬ ರಾಜಕಾರಣ ಅಂದ್ರೆ ಏನು ಅಂತ ಹೇಳಲಿ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಎ.ಮಂಜು ಸೋಲಿಸಲು ಶಾಸಕ ಪ್ರೀತಂಗೌಡ ಪ್ಲ್ಯಾನ್! ಆಡಿಯೋ ವೈರಲ್; ಇದು ಯಾರ ಪಿತೂರಿಯಂತೆ ಗೊತ್ತಾ?