Select Your Language

Notifications

webdunia
webdunia
webdunia
webdunia

ಪಡ್ಡೆಹುಲಿಯ ಜೊತೆ ಕಿರಿಕ್ ಕರ್ಣನ ಕಿತಾಪತಿ!

ಪಡ್ಡೆಹುಲಿಯ ಜೊತೆ ಕಿರಿಕ್ ಕರ್ಣನ ಕಿತಾಪತಿ!
ಬೆಂಗಳೂರು , ಮಂಗಳವಾರ, 9 ಏಪ್ರಿಲ್ 2019 (13:12 IST)
ಶ್ರೇಯಸ್ ನಾಯಕರಾಗಿ ನಟಿಸಿರುವ ಪಡ್ಡೆಹುಲಿ ಈಗ ಪ್ರತೀ ವರ್ಗಗಳ ಪ್ರೇಕ್ಷಕರನ್ನೂ ಸೆಳೆದುಕೊಂಡಿದೆ. ಎಂ.ರಮೇಶ್ ರೆಡ್ಡಿ ತೇಜಸ್ವಿನಿ ಎಂಟರ್ ಪ್ರೈಸಸ್ ಲಾಂಛನದಡಿಯಲ್ಲಿ ನಿರ್ಮಾಣ ಮಾಡಿರುವ ಈ ಚಿತ್ರ ಇದೇ ಏಪ್ರಿಲ್ ಹತ್ತೊಂಬತ್ತರಂದು ರಾಜ್ಯಾಧ್ಯಂತ ತೆರೆ ಕಾಣುತ್ತಿದೆ.
ಈ ಹಿಂದೆ ರಾಜಾಹುಲಿ ಎಂಬ ಸೂಪರ್ ಹಿಟ್  ಚಿತ್ರ ಕೊಟ್ಟಿದ್ದ ಗುರುದೇಶಪಾಂಡೆಯವರು ಪಡ್ಡೆಹುಲಿಯನ್ನೂ ನಿರ್ದೇಶನ ಮಾಡಿದ್ದಾರೆ. ರಾಜಾಹುಲಿ ಚಿತ್ರದ ಮೂಲಕ ರಾಕಿಂಗ್ ಸ್ಟಾರ್ ಯಶ್ ಅವರೇ ಶೈನಪ್ ಆಗಿದ್ದರು. ಇದೀಗ ಪಡ್ಡೆಹುಲಿಯ ಮೂಲಕ ಶ್ರೇಯಸ್ ಎಂಬ ಮತ್ತೋರ್ವ ಮಾಸ್ ಹೀರೋನ ಆಗಮನವಾಗೋದು ಖಾತರಿಯಾಗಿದೆ.
 
ಅಂದಹಾಗೆ ಈ ಚಿತ್ರವನ್ನು ಪ್ರತಿಯೊಂದು ರೀತಿಯಲ್ಲಿಯೂ ಆಕರ್ಷಕವಾಗಿ ರೂಪಿಸುವಲ್ಲಿ ಗುರು ದೇಶಪಾಂಡೆ ಶ್ರಮ ವಹಿಸಿದ್ದಾರೆ. ಪಡ್ಡೆಹುಲಿಯ ಆಕರ್ಷಣೆಗಳು ಹಲವಾರಿವೆ. ಅದರಲ್ಲಿ ಪಾತ್ರವರ್ಗವೂ ಪ್ರಧಾನವಾಗಿ ಸೇರಿಕೊಳ್ಳುತ್ತದೆ. ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಸುಧಾರಾಣಿ ಪಡ್ಡೆಹುಲಿಗೆ ವಿಭಿನ್ನ ಪಾತ್ರಗಳ ಮೂಲಕ ಸಾಥ್ ಕೊಟ್ಟಿದ್ದಾರೆ. ಅದೇ ರೀತಿ ರಕ್ಷಿತ್ ಶೆಟ್ಟಿ ಕೂಡಾ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ.
 
ರಕ್ಷಿತ್ ಇಲ್ಲಿ ಯಾವ ಪಾತ್ರ ಮಾಡಿದ್ದಾರೆಂಬ ಕುತೂಹಲ ಅವರ ಅಭಿಮಾನಿಗಳಲ್ಲಿದೆ. ಈ ಬಗ್ಗೆ ಚಿತ್ರತಂಡ ಒಂದು ಅಚರ್ಚರಿಯ ಸಂಗತಿಯನ್ನು ಬಿಟ್ಟು ಕೊಟ್ಟಿದೆ. ಆ ಪ್ರಕಾರವಾಗಿ ನೋಡೋದಾದರೆ, ರಕ್ಷಿತ್ ಕಿರಿಕ್ ಪಾರ್ಟಿಯ ಪ್ರಸಿದ್ಧ ಪಾತ್ರವಾದ ಕರ್ಣನಾಗಿಯೇ ನಟಿಸಿದ್ದಾರೆ. ಅವರ ಪಾತ್ರವಿಲ್ಲಿ ಕಿರಿಕ್ ಪಾರ್ಟಿಯ ಮುಂದುವರೆದ ಭಾಗದಂತಿದೆಯಂತೆ. ಕಿರಿಕ್ ಪಾರ್ಟಿಯ ಕರ್ಣ ಪಡ್ಡೆಹುಲಿಯ ಜೊತೆ ಸೇರಿ ಎಂಥಾ ಕಿತಾಪತಿ ಮಾಡಿದ್ದಾನೆಂಬುದು ಏಪ್ರಿಲ್ ಹತ್ತೊಂಭತ್ತರಂದು ಗೊತ್ತಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಡ್ಡೆಹುಲಿಯ ಜೊತೆ ನಿಶ್ವಿತಾ ನಾಯ್ಡು ರೊಮ್ಯಾನ್ಸ್!