Select Your Language

Notifications

webdunia
webdunia
webdunia
webdunia

ಈ ಪಡ್ಡೆಹುಲಿ ಪಕ್ಕಾ ವಿಷ್ಣುಭಕ್ತ!

ಈ ಪಡ್ಡೆಹುಲಿ ಪಕ್ಕಾ ವಿಷ್ಣುಭಕ್ತ!
ಬೆಂಗಳೂರು , ಮಂಗಳವಾರ, 9 ಏಪ್ರಿಲ್ 2019 (13:09 IST)
ನಿರ್ಮಾಪಕ ಕೆ ಮಂಜು ಅವರ ಪುತ್ರ ಶ್ರೇಯಸ್ ನಾಯಕನಾಗಿ ಅದ್ದೂರಿ ಎಂಟ್ರಿ ಕೊಡುತ್ತಿರುವ ಚಿತ್ರ ಪಡ್ಡೆಹುಲಿ. ಎಂ. ರಮೇಶ್ ರೆಡ್ಡಿಯವರು ತೇಜಸ್ವಿನಿ ಎಂಟರ್ ಪ್ರೈಸಸ್ ಲಾಂಛನದಡಿಯಲ್ಲಿ ನಿರ್ಮಾಣ ಮಾಡಿರುವ ಈ ಚಿತ್ರ ಇದೇ ಏಪ್ರಿಲ್ ಹತ್ತೊಂಬತ್ತರಂದು ಬಿಡುಗಡೆಯಾಗಲಿದೆ.
ಗುರುದೇಶಪಾಂಡೆ ನಿರ್ದೇಶನದ ಈ ಚಿತ್ರದಲ್ಲಿ ನಾಯಕ ಶ್ರೇಯಸ್ ಪಕ್ಕಾ ವಿಷ್ಣುಭಕ್ತನಾಗಿ ನಟಿಸಿದ್ದಾರೆ. ಈಗಾಗಲೇ ಹಾಡುಗಳಲ್ಲಿ ವಿಷ್ಣು ಗೆಟಪ್ಪಿನಲ್ಲಿಯೇ ನಟಿಸೋ ಮೂಲಕ ಶ್ರೇಯಸ್ ಸಾಹಸ ಸಿಂಹನ ಸಮಸ್ತ ಅಭಿಮಾನಿಗಳ ಪ್ರೀತಿಗೂ ಪಾತ್ರರಾಗಿದ್ದಾರೆ. ಆದರೆ ಇದರ ಹಿಂದೆಯೂ ಕೂಡಾ ರಿಯಲ್ ಆದ ಅಪ್ಪಟ ವಿಷ್ಣು ಅಭಿಮಾನವಿದೆ ಅನ್ನೋದು ವಿಶೇಷ!
 
ಗಂಡುಗಲಿ ಎಂದೇ ಹೆಸರಾಗಿರೋ ನಿರ್ಮಾಪಕ ಕೆ. ಮಂಜು ವಿಷ್ಣುವರ್ಧನ್ ಅವರ ಆಪ್ತರಾಗಿದ್ದವರು. ಅದೆಷ್ಟೋ ವರ್ಷದ್ದು ಈ ಸಖ್ಯ. ಹೀಗೆ ತಂದೆಯ ಕಾರಣದಿಂದ ಸಾಹಸಸಿಂಹನ ಪ್ರಭಾವ ಬೆಳೆಸಿಕೊಂಡಿದ್ದ ಶ್ರೇಯಸ್ ಕೂಡಾ ನಿಜಜೀವನದಲ್ಲಿಯೂ ವಿಷ್ಣು ಅವರನ್ನು ಆರಾಧಿಸಲಾರಂಭಿಸಿದ್ದರು. ಪಡ್ಡೆಹುಲಿ ಚಿತ್ರದಲ್ಲಿರೋ ವಿಷ್ಣು ಪ್ರೇಮದ ತುಂಬಾ ವಾಸ್ತವದ ಈ ಛಾಯೆಯಿದೆ.
 
ತಮ್ಮ ಮಗನ ಮೊದಲ ಚಿತ್ರದಲ್ಲಿಯೂ ಕೆ ಮಂಜು ಅವರು ವಿಷ್ಣು ಅಭಿಮಾನವನ್ನು ಫಳ ಫಳಿಸುವಂತೆ ಮಾಡಿದ್ದಾರೆ. ಈ ಕಾರಣದಿಂದಲೇ ವಿಷ್ಣು ಮೇಲಿನ ಅಭಿಮಾನದ ಹಾಡುಗಳೂ ಹೊರ ಬಂದಿವೆ. ಈ ಮೂಲಕವೇ ಮರೆಯಾದ ಆ ಚೇತನಕ್ಕೆ ಅರ್ಥಪೂರ್ಣ ಗೌರವ ಸಲ್ಲಿಸಿದ ತೃಪ್ತಿ ಮಂಜು ಅವರಲ್ಲಿದೆ. ಶ್ರೇಯಸ್ ವಿಷ್ಣು ಅಭಿಮಾನಿಯಾಗಿ ಹೇಗೆ ಅಭಿನಯಿಸಿದ್ದಾರೆಂಬುದನ್ನು ನೋಡಲು ಸಾಹಸ ಸಿಂಹನ ಅಭಿಮಾನಿ ಬಳಗ ಕಾತರಗೊಂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಣ್ಣ ಘಮಲಿನಿಂದ ಎದ್ದುಬಂದ ಪಡ್ಡೆಹುಲಿ!