Select Your Language

Notifications

webdunia
webdunia
webdunia
webdunia

ಎ.ಮಂಜು ಸೋಲಿಸಲು ಶಾಸಕ ಪ್ರೀತಂಗೌಡ ಪ್ಲ್ಯಾನ್! ಆಡಿಯೋ ವೈರಲ್; ಇದು ಯಾರ ಪಿತೂರಿಯಂತೆ ಗೊತ್ತಾ?

ಎ.ಮಂಜು ಸೋಲಿಸಲು ಶಾಸಕ ಪ್ರೀತಂಗೌಡ ಪ್ಲ್ಯಾನ್! ಆಡಿಯೋ ವೈರಲ್; ಇದು ಯಾರ ಪಿತೂರಿಯಂತೆ ಗೊತ್ತಾ?
ಹಾಸನ , ಮಂಗಳವಾರ, 9 ಏಪ್ರಿಲ್ 2019 (14:24 IST)
ಹಾಸನ : ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಮಂಜು ಗೆಲ್ಲೋದಿಲ್ಲ ಎಂದು ಶಾಸಕ ಪ್ರೀತಂಗೌಡ ಪಕ್ಷದ ಕಾರ್ಯಕರ್ತರೊಂದಿಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೊ ಇದೀಗ ವೈರಲ್ ಆಗಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ.


1.39 ನಿಮಿಷದ ಆಡಿಯೋದಲ್ಲಿ ಕಾರ್ಯಕರ್ತ ಹಾಗೂ ಶಾಸಕರ ನಡುವೆ ಸಂಭಾಷಣೆ ನಡೆದಿದೆ ಎನ್ನಲಾಗಿದ್ದು, ಇದರಲ್ಲಿ ಏಳು ತಿಂಗಳ ಹಿಂದೆ ಎ.ಮಂಜು ಹಾಕಿಸಿದ ಪೊಲೀಸ್ ಕೇಸ್ ನ್ನು ಬಿಜೆಪಿ ಮರೆತಿಲ್ಲ. ಎ. ಮಂಜು ಎರಡು ಲಕ್ಷ ಎಂಬತ್ತು ಸಾವಿರ ಲೀಡ್ ನಲ್ಲಿ ಸೋತ ಬಳಿಕ ಮತ್ತೆ ಸಿದ್ದರಾಮಯ್ಯ ಹತ್ತಿರ ಹೋಗ್ತಾರೆ ಎಂದು ಆಡಿಯೋದಲ್ಲಿ ಹೇಳಲಾಗಿದೆ.


ಈ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕ ಪ್ರೀತಂಗೌಡ, ಎ.ಮಂಜು ಬಿಜೆಪಿಗೆ ಬಂದಿರಲಿಲ್ಲ. ಆ ವೇಳೆ ಮಾತನಾಡಿದ ಆಡಿಯೋವನ್ನು ಎಡಿಟ್ ಮಾಡಲಾಗಿದೆ. ನನ್ನ ಮತ್ತು ಎ.ಮಂಜು ನಡುವೆ ವೈಮನಸ್ಸು ಹುಟ್ಟುಹಾಕಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.


ಅಲ್ಲದೇ ಈ ಬಗ್ಗೆ ಎ.ಮಂಜು ಪ್ರತಿಕ್ರಿಯೆ ನೀಡಿ, ವೈರಲ್ ಆಗಿರುವ ಆಡಿಯೋದಲ್ಲಿ ಇರುವುದು ಸತ್ಯಾಂಶವಲ್ಲ. ಇದು ಜೆಡಿಎಸ್ ನವರ ಪಿತೂರಿಯಾಗಿದೆ. ಕಾರ್ಯಕರ್ತರು ಇದಕ್ಕೆ ಕಿವಿಗೊಡಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಂಡ್ಯದಲ್ಲಿ ಭುಗಿಲೆದ್ದ ಬಂಡಾಯ; ಇಂದು ಸಭೆ ಕರೆದ ಸಿದ್ದರಾಮಯ್ಯ