Select Your Language

Notifications

webdunia
webdunia
webdunia
Tuesday, 8 April 2025
webdunia

ಮಂಡ್ಯದಲ್ಲಿ ಭುಗಿಲೆದ್ದ ಬಂಡಾಯ; ಇಂದು ಸಭೆ ಕರೆದ ಸಿದ್ದರಾಮಯ್ಯ

ಬೆಂಗಳೂರು
ಬೆಂಗಳೂರು , ಮಂಗಳವಾರ, 9 ಏಪ್ರಿಲ್ 2019 (10:43 IST)
ಬೆಂಗಳೂರು : ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬಂಡಾಯ ಕೈ ನಾಯಕರನ್ನು ಮನವೊಲಿಸಿ ಮೈತ್ರಿಧರ್ಮ ಪಾಲನೆ ಮಾಡುವಂತೆ ಸೂಚಿಸಲು ಕಾಂಗ್ರೆಸ್ ಶಾಸಕಾಂಗ ಸಭೆಯ ನಾಯಕ ಸಿದ್ದರಾಮಯ್ಯ ಇಂದು ಸಭೆ ಕರೆದಿದ್ದಾರೆ.


ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಪರ ಮತಯಾಚಿಸಲು ಮಾಜಿ ಶಾಸಕರಾದ ಚಲುವರಾಯಸ್ವಾಮಿ, ರಮೇಶ್‌ ಬಂಡಿಸಿದ್ದೇಗೌಡ, ನರೇಂದ್ರಸ್ವಾಮಿ ಮನಸ್ಸು ಮಾಡುತ್ತಿಲ್ಲ. ಇವರೊಂದಿಗೆ ಮಂಡ್ಯ ಕಾಂಗ್ರೆಸ್‌ನ ಇತರರೂ ಸೇರಿಕೊಂಡಿದ್ದಾರೆ.
ಹಾಗಾಗಿ ಮಂಡ್ಯದಲ್ಲಿ ಕಾಂಗ್ರೆಸ್ ನಾಯಕರು ನಿಖಿಲ್ ಕುಮಾರಸ್ವಾಮಿ ಪರವಾಗಿ ನಿಲ್ಲದಿದ್ದರೆ, ಅದರ ನೇರ ಪರಿಣಾಮ ಮೈಸೂರಿನ ಮೇಲೆ ಬೀರಲಿದೆ ಎಂದು ಸಚಿವ ಸಾ.ರಾ. ಮಹೇಶ್ ಹೇಳಿದ್ದಾರೆ. ಹೀಗಾಗಿ ಇಂದು ಚಲುವರಾಯಸ್ವಾಮಿ ಸೇರಿದಂತೆ ಸ್ಥಳೀಯ ನಾಯಕರ ಮನವೊಲಿಸುವ ಕೆಲಸವನ್ನು ಸಿದ್ದರಾಮಯ್ಯನವರು ಮಾಡಲಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರಾಕಿಂಗ್ ಸ್ಟಾರ್ ಯಶ್ ಬಾಡಿಗೆ ಮನೆ ವಿವಾದ ಕೆಣಕಿದ ನಿಖಿಲ್ ಕುಮಾರಸ್ವಾಮಿ