Select Your Language

Notifications

webdunia
webdunia
webdunia
webdunia

ಸೂರ್ಯರ ಬಳಿ ಬಂದು ಮೋದಿ ಪರ ಘೋಷಣೆ

ಸೂರ್ಯರ ಬಳಿ ಬಂದು ಮೋದಿ ಪರ ಘೋಷಣೆ
ಬೆಂಗಳೂರು , ಮಂಗಳವಾರ, 9 ಏಪ್ರಿಲ್ 2019 (18:01 IST)
ರಾಜಧಾನಿಯ ಬಸವನಗುಡಿಯ ಪಾರ್ಕ್ ಗಳಲ್ಲಿ ಸೂರ್ಯನ ತೇಜಸ್ಸು ದಿನೇ ದಿನೇ ಇಮ್ಮಡಿಸುತ್ತಿದೆ.

ಬೆಂಗಳೂರು ದಕ್ಷಿಣ ಲೋಕಸಭಾ ಬಿಜೆಪಿ ಅಭ್ಯರ್ಥಿಯನ್ನು  ಕಂಡಾಕ್ಷಣ ಪಾರ್ಕ್ ಗಳಲ್ಲಿ ವಾಕಿಂಗ್, ಜಾಗಿಂಗ್ ಮಾಡುತ್ತಿದ್ದ ನಾಗರೀಕರು ಮೋದಿ, ಮೋದಿ ಎಂದು ಜಯಕಾರ ಹಾಕುತ್ತಾ ತೇಜಸ್ವಿ ಸೂರ್ಯರವರ ಬಳಿ ಬಂದು ಬೆಂಬಲ ಸೂಚಿಸುತ್ತಿದ್ದಾರೆ. ಅಭ್ಯರ್ಥಿ ಹಿಂದೆಯೇ ಹೆಜ್ಜೆ ಹಾಕಿದರೆ,  ಇನ್ನು ಕೆಲವರು ಬಿಜೆಪಿ ಕರಪತ್ರಗಳನ್ನು ಪಡೆದು ತಾವು ಹಂಚಲು ಮುಂದಾಗಿ ಬಿಜೆಪಿ ಪರ ಪ್ರಚಾರದಲ್ಲಿ ತೊಡಗಿದ್ದಾರೆ. ಅಷ್ಟರ ಮಟ್ಟಿಗೆ ಇಲ್ಲಿ ಬಿಜೆಪಿಯ ಪರ ಅಲೆ ಎದ್ದಿದೆ.

ತನ್ನ ಪಾಲಿಗೆ ಭದ್ರಕೋಟೆ ಎನಿಸಿಕೊಂಡಿರುವ ಬಸವನಗುಡಿಯಲ್ಲಿ ಬಿಜೆಪಿ ಮತ ಭರಾಟೆಯನ್ನು ಮುಂದುವರೆಸಿ ಮತದಾರನನ್ನು ಗೆಲ್ಲಲು ಬಿಜೆಪಿ ಯಶಸ್ವಿಯಾಗಿದೆ.

ಈಗಾಗಲೇ,  ಈ ಕ್ಷೇತ್ರದಲ್ಲಿ ಎದ್ದಿರುವ ಮೋದಿ ಅಲೆಯ ನಡುವೆಯೇ ಬಸವನಗುಡಿ ಶಾಸಕ ರವಿಸುಬ್ರಮಣ್ಯ, ಹನುಮಂತನಗರ ಬಿಬಿಎಂಪಿ ಸದಸ್ಯ ಕೆಂಪೇಗೌಡ, ವಿದ್ಯಾಪೀಠದ ಬಿಬಿಎಂಪಿ ಸದಸ್ಯೆ ಶ್ಯಾಮಲ ಸಾಯಿಕುಮಾರ್ , ಸೇರಿದಂತೆ ಸ್ಥಳೀಯ ಮುಖಂಡರು, ಕಾರ್ಯಕರ್ತರ ಜೊತೆಗೂಡಿ ಉದ್ಯಾನವನಗಳಿಗೆ ಭೇಟಿ ನೀಡಿ ತೇಜಸ್ವಿ ಸೂರ್ಯ ಮತದಾರರಲ್ಲಿ ಮತಯಾಚನೆ ನಡೆಸಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಎಚ್.ಡಿ ದೇವೇಗೌಡರ ಕುಟುಂಬ ಏತಕ್ಕಾಗಿ ಕಣ್ಣೀರು ಹಾಕ್ತಾರೆ- ಕೆ.ಎಸ್ ಈಶ್ವರಪ್ಪ ಕಿಡಿ