Select Your Language

Notifications

webdunia
webdunia
webdunia
webdunia

ಈಶ್ವರಪ್ಪ ಒಬ್ಬ ಮಾಧ್ಯಮ ಎಂಟರ್‌ ಟೈನ್‌ ಮೆಂಟ್‌. ಅವರ ಮಾತಿಗೆ ಹೆಚ್ಚಿನ ಕಿಮ್ಮತ್ತು ಇಲ್ಲ- ಎಂ.ಬಿ. ಪಾಟೀಲ್ ವ್ಯಂಗ್ಯ

ಈಶ್ವರಪ್ಪ ಒಬ್ಬ ಮಾಧ್ಯಮ ಎಂಟರ್‌ ಟೈನ್‌ ಮೆಂಟ್‌. ಅವರ ಮಾತಿಗೆ ಹೆಚ್ಚಿನ ಕಿಮ್ಮತ್ತು ಇಲ್ಲ- ಎಂ.ಬಿ. ಪಾಟೀಲ್ ವ್ಯಂಗ್ಯ
ವಿಜಯಪುರ , ಸೋಮವಾರ, 8 ಏಪ್ರಿಲ್ 2019 (14:23 IST)
ವಿಜಯಪುರ : ಕೆ.ಎಸ್.ಈಶ್ವರಪ್ಪ ಒಬ್ಬ ಮಾಧ್ಯಮ  ಎಂಟರ್‌ ಟೈನ್‌ ಮೆಂಟ್‌. ಅವರ  ಮಾತಿಗೆ ಹೆಚ್ಚಿನ ಕಿಮ್ಮತ್ತು ಇಲ್ಲ. ಅವರ ಬಗ್ಗೆ ನಾನು ಮಾತನಾಡಲ್ಲ ಎಂದು ಗೃಹ ಸಚಿವ ಎಂ.ಬಿ. ಪಾಟೀಲ್ ಟಾಂಗ್ ನೀಡಿದ್ದಾರೆ.


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನೀರಾವರಿ ಸಚಿವನಾಗಿದ್ದಾಗ ಮಾಡಿರುವ ಕೆಲಸ ಇಡೀ ಜಗತ್ತಿಗೆ ಗೊತ್ತಿದೆ. ನನ್ನ ಕೆಲಸ ಸೂರ್ಯ ಹಾಗೂ ಚಂದ್ರ ನೋಡಿದ್ದಾರೆ. ನಾನು ನನ್ನ ಲೆವಲ್ ಜನರ ಜೊತೆಗೆ ಮಾತನಾಡುತ್ತೇನೆ. ನನ್ನ ಲೆವಲ್ ಕೆಳಗೆ ಇರುವವರ ಬಗ್ಗೆ ಮಾತನಾಡಲ್ಲ ಎಂದು ಕಿಡಿಕಾರಿದ್ದಾರೆ.


ಇನ್ನು ಲಿಂಗಾಯತ ಧರ್ಮ ನಮ್ಮ ಅಸ್ಮಿತೆ, ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತ ಧರ್ಮವನ್ನು ಬಳಸಿಕೊಂಡಿಲ್ಲ. ಲಿಂಗಾಯತರನ್ನು ಕೂಡ ನಾನು ಬಲಸಿಕೊಂಡಿಲ್ಲ. ಲಿಂಗಾಯತ ಧರ್ಮದ ಹೋರಾಟ ಯಾವುದೇ ಪಕ್ಷಕ್ಕೆ ಸಂಬಂಧಪಟ್ಟಿದ್ದಲ್ಲ. ಲಿಂಗಾಯತ ಚುನಾವಣೆ ವಿಚಾರವಲ್ಲ. ನ್ಯಾಯಾಲಯಕ್ಕೆ ಹೋಗಬೇಕೋ, ಬೇಡವೋ ಎನ್ನುವುದನ್ನು ಜಾಗತಿಕ ಲಿಂಗಾಯತ ಮಹಾಸಭಾದವರು ತೀರ್ಮಾನ ಮಾಡುತ್ತಾರೆ ಎಂದು ಅವರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಗೆ ಬಿಗ್ ಶಾಕ್; ಅಪರೇಶನ್ ಹಸ್ತದ ಪ್ರಭಾವಕ್ಕೊಳಗಾದ ಬಿಜೆಪಿ ಮಾಜಿ ಶಾಸಕ