Publish Date: Mon, 08 Apr 2019 (09:19 IST)
Updated Date: Mon, 08 Apr 2019 (09:21 IST)
ಚೆನ್ನೈ: ಸಾಮಾನ್ಯವಾಗಿ ಧೋನಿ ಅಷ್ಟು ಬೇಗ ಮೈದಾನದಲ್ಲಿ ತಮ್ಮ ಭಾವನೆಗಳನ್ನು ತೋರ್ಪಡಿಸುವುದಿಲ್ಲ. ಆದರೆ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಧೋನಿ ಸಿಟ್ಟುಗೊಂಡಿದ್ದು ನೋಡಿ ಅಂಪಾಯರ್ ಕೂಡಾ ಅವಾಕ್ಕಾದ ಘಟನೆ ನಡೆದಿದೆ.
ಪಂಜಾಬ್ ಗೆಲುವಿಗೆ 12 ಬಾಲ್ ಗಳಲ್ಲಿ 32 ರನ್ ಬೇಕಾಗಿದ್ದಾಗ ದಾಳಿಗಿಳಿದ ದೀಪಕ್ ಚಹರ್ ಮೊದಲ ಎಸೆತವನ್ನು ನೋ ಬಾಲ್ ಎಸೆದರು. ಇದನ್ನು ಬ್ಯಾಟ್ಸ್ ಮನ್ ಸರ್ಫರಾಜ್ ಖಾನ್ ಬೌಂಡರಿ ಬಾರಿಸಿದರು. ಮುಂದಿನ ಎಸೆತವನ್ನೂ ದೀಪಕ್ ನೋ ಬಾಲ್ ಎಸೆದರು. ಅದರಲ್ಲಿ ಎರಡು ರನ್ ಹರಿದುಬಂತು.
ಆದರೆ ಇಷ್ಟರಲ್ಲೇ ಧೋನಿ ಸಹನೆ ಕಟ್ಟೆಯೊಡೆದಿತ್ತು. ಸುರೇಶ್ ರೈನಾ ಜತೆಗೆ ನೇರವಾಗಿ ಬೌಲರ್ ಬಳಿಗೆ ಬಂದ ಧೋನಿ ಸರಿಯಾಗಿ ಬೈದು ಬುದ್ಧಿ ಹೇಳಿದರು. ಧೋನಿ ಕೋಪಗೊಂಡು ಬಂದಿದ್ದನ್ನು ನೋಡಿ ಅಂಪಾಯರ್ ಕೂಡಾ ಅವಾಕ್ಕಾಗಿ ನೋಡುತ್ತಾ ನಿಂತರು. ಆದರೆ ಧೋನಿ ಕೈಯಲ್ಲಿ ಬೈಸಿಕೊಂಡ ಮೇಲೆ ಬುದ್ಧಿ ಕಲಿತುಕೊಂಡ ದೀಪಕ್ ಮುಂದಿನ ಎಸೆತಗಳನ್ನು ಸರಿಯಾಗಿಯೇ ಹಾಕಿದರು!
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ