Publish Date: Mon, 08 Apr 2019 (09:15 IST)
Updated Date: Mon, 08 Apr 2019 (09:17 IST)
ನವದೆಹಲಿ: ಇತ್ತೀಚೆಗಷ್ಟೇ ಒಂದೂ ಐಪಿಎಲ್ ಟ್ರೋಫಿ ಗೆಲ್ಲದ ವಿರಾಟ್ ಕೊಹ್ಲಿ ನಾಲಾಯಕ್ ನಾಯಕ ಎಂದು ವ್ಯಂಗ್ಯ ಮಾಡಿದ್ದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಮತ್ತೆ ಕೊಹ್ಲಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.
ಗಂಭೀರ್ ಹೇಳುವುದಕ್ಕೂ ಕೊಹ್ಲಿ ಈ ಆವೃತ್ತಿಯ ಐಪಿಎಲ್ ನಲ್ಲೂ ನಾಯಕರಾಗಿ ವಿಫಲರಾಗಿರುವುದಕ್ಕೂ ಸರಿಯಾಗಿದೆ. ಇದೀಗ ಆರ್ ಸಿಬಿ ಸತತ ಸೋಲಿನ ಬಳಿಕ ಕೊಹ್ಲಿ ನಾಯಕರಾಗಿ ಇನ್ನೂ ಎಳಸು ಎಂದು ಗಂಭೀರ್ ವ್ಯಂಗ್ಯ ಮಾಡಿದ್ದಾರೆ.
‘ಕೊಹ್ಲಿ ಒಬ್ಬ ಬ್ಯಾಟ್ಸ್ ಮನ್ ಆಗಿ ಮಾಸ್ಟರ್. ಆದರೆ ಒಬ್ಬ ನಾಯಕರಾಗಿ ಇನ್ನೂ ಎಳಸು. ಅವರು ಇನ್ನೂ ಕಲಿಯುವುದು ಸಾಕಷ್ಟಿದೆ. ಬೌಲರ್ ಗಳ ಮೇಲೆ ಗೂಬೆ ಕೂರಿಸುವ ಬದಲು ಅವರು ಸೋಲಿನ ಹೊಣೆ ತಾವೇ ಹೊರಬೇಕು’ ಎಂದು ಗಂಭೀರ್ ಟೀಕಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ