Select Your Language

Notifications

webdunia
webdunia
webdunia
webdunia

ಐಪಿಎಲ್: ಐದನೇ ಸೋಲಿನೊಂದಿಗೆ ಬೇಡದ ದಾಖಲೆಯೊಂದು ವಿರಾಟ್ ಕೊಹ್ಲಿ ಹೆಗಲಿಗೇರಿತು

ಐಪಿಎಲ್: ಐದನೇ ಸೋಲಿನೊಂದಿಗೆ ಬೇಡದ ದಾಖಲೆಯೊಂದು ವಿರಾಟ್ ಕೊಹ್ಲಿ ಹೆಗಲಿಗೇರಿತು
ಬೆಂಗಳೂರು , ಶನಿವಾರ, 6 ಏಪ್ರಿಲ್ 2019 (09:48 IST)
ಬೆಂಗಳೂರು: ಐಪಿಎಲ್ ನ  ಈ ಆವೃತ್ತಿಯಲ್ಲಿ ಒಂದೂ ಜಯದ ಖಾತೆಯೇ ತೆರೆಯದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಬೇಡದ ದಾಖಲೆಯೊಂದನ್ನು ಮೈಮೇಲೆಳೆದುಕೊಂಡಿದ್ದಾರೆ.


ಇದೀಗ ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿಯಷ್ಟು ಪಂದ್ಯ ಸೋತ ಇನ್ನೊಬ್ಬ ಆಟಗಾರ ಇಲ್ಲ ಎಂಬ ಕುಖ್ಯಾತಿಗೆ ಅವರು ಒಳಗಾದರು. ಕೊಹ್ಲಿ ಒಟ್ಟು 86 ಪಂದ್ಯಗಳನ್ನು ಸೋತಿದ್ದಾರೆ.

ಒಟ್ಟು 168 ಐಪಿಎಲ್ ಪಂದ್ಯವಾಡಿರುವ ಕೊಹ್ಲಿ 86 ಸೋಲು ಕಂಡಿದ್ದಾರೆ. 12 ವರ್ಷದ ಐಪಿಎಲ್ ಇತಿಹಾಸದಲ್ಲೇ ಇಷ್ಟು ಸೋಲು ಕಂಡವರು ಯಾರೂ ಇಲ್ಲ. ವಿಶೇಷವೆಂದರೆ 5110 ರನ್ ಗಳಿಸಿರುವ ಕೊಹ್ಲಿಯೇ ಐಪಿಎಲ್ ನಲ್ಲಿ ಅತ್ಯಂತ ಹೆಚ್ಚು ರನ್ ಗಳಿಸಿದವರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಮುಂಬೈ ಇಂಡಿಯನ್ಸ್ ನಿಂದಲೂ ಯುವರಾಜ್ ಸಿಂಗ್ ಕಿತ್ತೊಗೆಯಲು ಆಗ್ರಹ