Publish Date: Sat, 06 Apr 2019 (09:19 IST)
Updated Date: Sat, 06 Apr 2019 (09:20 IST)
ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ಪರ ಐಎಪಿಲ್ ಆಡುವ ರಿಷಬ್ ಪಂತ್ ರನ್ನು ಹೊಗಳಿ ಅಟ್ಟಕ್ಕೇರಿಸಿದ್ದು ಜಾಸ್ತಿಯಾಯಿತು. ಒಂದೇ ಪಂದ್ಯದಲ್ಲಿ ಅಬ್ಬರಿಸಿದ್ದು ಬಿಟ್ಟರೆ ಮತ್ತೆ ಸಾಧನೆ ಶೂನ್ಯ.
ರಿಷಬ್ ಒಬ್ಬ ಓವರ್ ರೇಟೆಡ್ ಪ್ಲೇಯರ್. ಅವರು ಟೀಂ ಇಂಡಿಯಾದಲ್ಲೂ ನಾಲ್ಕನೇ ಕ್ರಮಾಂಕಕ್ಕೆ ಲಾಯಕ್ಕಾದ ಬ್ಯಾಟ್ಸ್ ಮನ್ ಅಲ್ಲ ಅಂತ ಅಭಿಮಾನಿಗಳು ಟ್ವಿಟರ್ ನಲ್ಲಿ ಟ್ರೋಲ್ ಮಾಡಿದ್ದಾರೆ.
ಸನ್ ರೈಸರ್ಸ್ ಹೈದರಾಬಾದ್ ವಿರುದ್ಧವೂ ರಿಷಬ್ ವಿಫಲವಾದ ಬಳಿಕ ಅಭಿಮಾನಿಗಳ ಆಕ್ರೋಶ ಮೇರೆ ಮೀರಿದೆ. ಕೇವಲ ಶೋಕಿ ಮಾಡಲಷ್ಟೇ ಈತ ಲಾಯಕ್ಕು. ವಿಪರೀತ ಈತನಿಗೆ ಪ್ರಚಾರ ಕೊಡುವುದು, ಹೊಗಳಿ ಅಟ್ಟಕ್ಕೇರಿಸುವುದು ಬಿಟ್ಟು, ಈತನ ಬ್ಯಾಟಿಂಗ್ ಮತ್ತು ಕೀಪಿಂಗ್ ಸುಧಾರಿಸುವುದರತ್ತ ಡೆಲ್ಲಿ ಕೋಚ್ ಗಳು ಗಮನಹರಿಸಬೇಕು ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ