ಐಪಿಎಲ್: ಪಂದ್ಯದ ಬಳಿಕ ಸ್ಟೇಡಿಯಂ ಕ್ಲೀನ್ ಮಾಡಿದ ಚೆನ್ನೈ ಅಭಿಮಾನಿಗಳಿಗೆ ಸಿಕ್ಕಿದ್ದೇನು ಗೊತ್ತಾ?!

ಸೋಮವಾರ, 8 ಏಪ್ರಿಲ್ 2019 (09:02 IST)
ಚೆನ್ನೈ: ಕ್ಲೀನ್ ಇಂಡಿಯಾ ಎಂಬ ಘೋಷ ವಾಕ್ಯಗಳು ಕೇವಲ ಮಾತುಗಳಿಗೆ ಮಾತ್ರ ಸೀಮಿತವಾಗಿದೆ. ಯಾವುದೇ ಯೋಜನೆ ಹೊರತಂದರೂ ಎಲ್ಲೆಂದರಲ್ಲಿ ಕಸ ಬಿಸಾಕುವ ನಮ್ಮವರ ಚಾಳಿ ಬಿಟ್ಟು ಹೋಗುವುದಿಲ್ಲ.


ಅದಕ್ಕೆ ಕ್ರಿಕೆಟ್ ಮೈದಾನಗಳೂ ಹೊರತಲ್ಲ. ಪಂದ್ಯ ನಡೆಯುವಾಗ ಟೈಂ ಪಾಸ್ ಗೆ ಏನೇನೋ ತಿಂದು ಅಲ್ಲಲ್ಲೇ ಬಿಸಾಕಿ ಮೈದಾನವನ್ನೇ ಗಲೀಜು ಮಾಡಿಟ್ಟು ಪ್ರೇಕ್ಷಕರು ಹೊರ ಹೋಗುತ್ತಾರೆ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಧಿಕೃತ ಅಭಿಮಾನಿ ಬಳಗ ‘ವಿಸಿಲ್ ಪೋಡು ಆರ್ಮಿ’ ಮೈದಾನ ಶುಚಿಗೊಳಿಸಿ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಶನಿವಾರ ಕಿಂಗ್ಸ್ ಇಲೆವೆನ್ ವಿರುದ್ಧದ ಪಂದ್ಯವಾದ ಬಳಿಕ ಚೆನ್ನೈ ಮೈದಾನದಲ್ಲಿ ರಾಶಿ ರಾಶಿ ಕಸ ಬಿದ್ದಿತ್ತು. ಹೀಗಾಗಿ ವಿಸಿಲ್ ಪೋಡು ಆರ್ಮಿ ಪಂದ್ಯದ ಬಳಿಕ ಮನೆಗೆ ಹೋಗದೇ ಮೈದಾನದಲ್ಲೇ ಇದ್ದು, ಕಸ ಶುಚಿಗೊಳಿಸುವ ಕೆಲಸ ಮಾಡಿದ್ದಾರೆ. ಹೀಗೆ ಮಾಡಿ 10 ಕೆ.ಜಿ ಕಸ ಸಂಗ್ರಹ ಮಾಡಿದ್ದಾರೆ! ಈ ಅಭಿಮಾನಿಗಳ ಕೆಲಸವನ್ನು ಸ್ವತಃ ಸಿಎಸ್ ಕೆ ಆಟಗಾರ ಸುರೇಶ್ ರೈನಾ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಪ್ರಕಟಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಐಪಿಎಲ್: ಟ್ರೋಲ್ ಮಾಡಿಯೇ ಸುಸ್ತಾದ ಆರ್ ಸಿಬಿ ಟ್ರೋಲಿಗರು!