ಬಾಗಲಕೋಟೆ : ನಿಖಿಲ್ ಸೋಲಿಸುವುದರ ಮೂಲಕ ತನ್ನನ್ನು ಮುಗಿಸಲು ಸಂಚು ಮಾಡಿದ್ದಾರೆ ಎಂಬ ಸಿಎಂ ಹೇಳಿಕೆಗೆ ಅದು ಸಂಚಲ್ಲ ರಾಜಕೀಯ ಎಂದು ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ನಿಖಿಲ್ ಸೋಲಿಸುವುದಕ್ಕಾಗಿಯೇ ಸುಮಲತಾಗೆ ಬೆಂಬಲ ನೀಡಿದ್ದು. ಜೆಡಿಎಸ್ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಂದಾಣಿಕೆ ಇಲ್ಲ. ಮಂಡ್ಯ ಲೋಕಸಭಾ ಕ್ಷೇತ್ರದ ಬಗ್ಗೆ ಅವರು ಹತಾಶರಾಗಿದ್ದಾರೆ. ಸೋಲಿನ ಭೀತಿಗೆ ಇಡೀ ಕುಟುಂಬ ಪ್ರಚಾರ ಮಾಡ್ತಿದೆ. ಮಾಜಿ ಸಿಎಂ ಸಿದ್ಧರಾಮಯ್ಯ ರನ್ನೂ ಪ್ರಚಾರಕ್ಕೆ ಕರೆದಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯನ್ನೂ ಕರೆಸುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಹಾಗೆ ಪಾಕ್ ಜತೆ ಸಂಘರ್ಷದ ಬಗ್ಗೆ ಮೊದಲೇ ತಿಳಿದಿತ್ತೆಂಬ ಸಿಎಂ ಹೇಳಿಕೆ ವಿಚಾರಕ್ಕೆ ಸಂಬಂಧಸಿದಂತೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಕುಮಾರಸ್ವಾಮಿಗೆ ಗೊತ್ತಿದ್ದರೆ ಅಧಿಕಾರಿಗಳಿಗೆ ತಿಳಿಸಬೇಕಿತ್ತು. ಎರಡು ವರ್ಷ ಏಕೆ ಸುಮ್ಮನಿದ್ರಿ? ಸೈನಿಕರು ಸಾಯಲಿ ಎಂದು ಸುಮ್ಮನಿದ್ರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
RSS ಬೆಳೆಯಲು ಬಿಡಲ್ಲವೆಂದು ಕೈ ನಾಯಕರು ಹೇಳಿರುವುದಕ್ಕೆ ತಿರುಗೇಟು ನೀಡಿದ ಅವರು, ಇಂದಿರಾ, ನೆಹರುರಿಂದಲೇ RSSಗೆ ಏನೂ ಮಾಡಲಾಗಿಲ್ಲ. ಇನ್ನೂ 100 ಸಿದ್ಧರಾಮಯ್ಯ, 1000 ದಿನೇಶ್ ರಂತಹವ್ರು ಬಂದ್ರೂ RSS ಬೆಳವಣೆಗೆಯನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ