Select Your Language

Notifications

webdunia
webdunia
webdunia
Monday, 7 April 2025
webdunia

ಫೇಸ್ ಬುಕ್ ಬಳಕೆದಾರರೇ ಎಚ್ಚರ! ಸಂಸ್ಥೆಯೇ ನಿಮ್ಮ ಡೇಟಾ,ಖಾಸಗಿ ಸಂದೇಶಗಳನ್ನು ಮಾರಾಟ ಮಾಡುತ್ತಿದೆಯಂತೆ

ನವದೆಹಲಿ
ನವದೆಹಲಿ , ಸೋಮವಾರ, 8 ಏಪ್ರಿಲ್ 2019 (09:21 IST)
ನವದೆಹಲಿ : ಫೇಸ್ ಬುಕ್ ನಲ್ಲಿ ಬಳಕೆದಾರರು ಖಾಸಗಿ ಸಂದೇಶ ಕಳುಹಿಸುವ ಮುನ್ನ ಎಚ್ಚರಿಕೆಯಿಂದಿರಿ. ಯಾಕೆಂದರೆ ಹಣಕ್ಕಾಗಿ ಫೇಸ್ ಬುಕ್ ಸಂಸ್ಥೆಯೇ ಬಳಕೆದಾರರ ಡೇಟಾ ಮಾರಾಟ ಮಾಡುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.


ಫೇಸ್ ಬುಕ್ ನಲ್ಲಿ ವೀವ್ ಆಯಸ್ ಎಂಬ ಆಪ್ಷನ್ ಬಳಕೆದಾರರ ಉಪಯೋಗಕ್ಕಾಗಿ ಇರುವಂತದ್ದು, ಆದರೆ ಈ ಆಪ್ಷನ್ ಉಪಯೋಗಕ್ಕಿಂತ ಫೇಸ್ ಬುಕ್ ಬಳಕೆದಾರರ ಖಾತೆಗಳು ಹ್ಯಾಕ್ ಆಗುತ್ತಿವೆ. ವೀವ್ ಆಯಸ್ ಎಂಬ ಆಪ್ಷನ್ ಬಳಸಿ ಟೋಕನ್ ನಂಬರ್ ಕದಿಯುವ ಮೂಲಕ ಖಾತೆಗಳನ್ನು ಹ್ಯಾಕ್ ಮಾಡಬಹುದು ಎಂದು ಸಂಸ್ಥೆಯೇ ತಿಳಿಸಿತ್ತು.


ಆದರೆ ಇದೀಗ ಫೇಸ್ ಬುಕ್ ಸಂಸ್ಥೆಯೇ ಬಳಕೆದಾರರ ಡೇಟಾ,ಖಾಸಗಿ ಸಂದೇಶಗಳು, ಸಂಪರ್ಕ ಸಮೇತ ಪ್ರಪಂಚದಲ್ಲಿಯೇ ಅತೀ ದೊಡ್ಡ ಕಂಪನಿಗಳಾದ ಮೈಕ್ರೋ ಸಾಫ್ಟ್, ಅಮೇಜಾನ್ ರೀತಿಯ ಸಂಸ್ಥೆಗಳಿಗೆ ಮಾರಾಟ ಮಾಡುತ್ತಿದೆ ಎಂದು ಫೇಸ್ ಬುಕ್ ಆಂತರಿಕ ಮೂಲಗಳು ತಿಳಿಸಿವೆ ಎಂದು ನ್ಯೂಯಾರ್ಕ್ ಮೂಲದ ಪತ್ರಿಕೆಯೊಂದು ವರದಿ ಮಾಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ತಾಕತ್ತಿದ್ದರೆ ನನ್ನ ಮೇಲಿನ ಎಲ್ಲಾ ಕೇಸು ರೀ ಓಪನ್ ಮಾಡಿಸಿ -ಸಿಎಂ ಸವಾಲು ಹಾಕಿದ ಬಿಎಸ್ ವೈ