Publish Date: Mon, 08 Apr 2019 (09:32 IST)
Updated Date: Mon, 08 Apr 2019 (09:34 IST)
ಬೆಂಗಳೂರು: ಆರ್ ಸಿಬಿ ತಂಡ ಪ್ರತಿ ನಿತ್ಯ ಸೋಲುವುದು, ಅದಕ್ಕೆ ನೆಪ ಹುಡುಕುತ್ತಾ ಕೂರುವುದು ನಾಯಕ ವಿರಾಟ್ ಕೊಹ್ಲಿಗೂ ಸಾಕಾಗಿದೆಯಂತೆ.
ಪಂದ್ಯದ ಬಳಿಕ ಮಾತನಾಡಿರುವ ವಿರಾಟ್ ಕೊಹ್ಲಿ ನಾವು ಆಡಿದ ಪ್ರತೀ ಪಂದ್ಯದಲ್ಲೂ ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳಲಿಲ್ಲ. ಪ್ರತಿ ನಿತ್ಯ ಕಾರಣ ಹೇಳುತ್ತಾ ಕೂರಲು ಆಗುವುದಿಲ್ಲ. ಇದುವೇ ಈ ಬಾರಿಯ ಸೀಸನ್ ನಲ್ಲಿ ಆರ್ ಸಿಬಿ ಕತೆ ಎಂದು ವಿರಾಟ್ ಕೊಹ್ಲಿ ನಿರಾಶೆ ವ್ಯಕ್ತಪಡಿಸಿದ್ದಾರೆ.
ಸತತ ಆರು ಪಂದ್ಯಗಳ ಬಳಿಕ ವಿರಾಟ್ ಕೊಹ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಸತತ ಸೋಲಿನಿಂದ ಆಟಗಾರರೂ ಕಂಗೆಟ್ಟಿದ್ದಾರೆ. ಆದರೆ ನಾವೀಗ ಅದನ್ನೆಲ್ಲಾ ಮರೆತು ಕೊಂಚ ರಿಲ್ಯಾಕ್ಸ್ ಆಗಬೇಕಿದೆ. ಏನು ಬರುತ್ತದೋ ಅದನ್ನು ಎದುರಿಸಲು ಕಲಿಯಬೇಕಿದೆ ಎಂದು ಕೊಹ್ಲಿ ಹತಾಶೆ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ