Publish Date: Mon, 03 Jun 2019 (18:57 IST)
Updated Date: Mon, 03 Jun 2019 (19:11 IST)
ರಾಜ್ಯದಲ್ಲಿ ಮಧ್ಯಂತರ ಚುನಾವಣೆಯ ಸುಳಿವು ದೊರಕಿದೆ.
ಕೇಂದ್ರ ಸಚಿವ ಡಿ. ವಿ. ಸದಾನಂದಗೌಡ ಈ ಸುಳಿವು ನೀಡಿದ್ದಾರೆ.
ಬೆಂಗಳೂರಿನಲ್ಲಿ ಕೇಂದ್ರ ಸಚಿವ ಡಿ. ವಿ. ಸದಾನಂದಗೌಡ ಹೇಳಿಕೆ ನೀಡಿದ್ದು, ನಾವು ಮೈತ್ರಿ ಸರ್ಕಾರ ಬೀಳಿಸಲು ಹೋಗಲ್ಲ. ಅವರಾಗಿಯೇ ಬೀಳಿಸಿದ್ರೆ ನಾವು ಹೊಣೆಯಲ್ಲ ಎಂದರು.
ಅವರಾಗಿಯೇ ಸರ್ಕಾರ ಬೀಳಿಸಿದ್ರೆ ಬಿಜೆಪಿ ಸರ್ಕಾರ ಬರಲಿದೆ ಎಂದರು.
ರಾಜ್ಯದಲ್ಲಿ ನಾವು ಮತ್ತೆ ಸಿಂಗಲ್ ಲಾರ್ಜೆಸ್ಟ್ ಪಕ್ಷವಾಗಿ ಅಧಿಕಾರ ಹಿಡಿಯುತ್ತೇವೆ ಎಂದರು. ಅಭಿವೃದ್ದಿ ವಿಷಯದಲ್ಲಿ ನಾವು ಎಂದೂ ರಾಜಕಾರಣ ಬೆರೆಸುವುದಿಲ್ಲ. ನಾವು ರಾಜ್ಯದ ಪರವಾಗಿದ್ದೇವೆ. ನಾವಾಗಿಯೇ ಸರ್ಕಾರ ಬೀಳಿಸುವುದಿಲ್ಲ. ಅವರಾಗಿಯೇ ಸರ್ಕಾರ ಬೀಳಿಸಿಕೊಂಡರೆ ನಾವು ಹೊಣೆಯಲ್ಲ. ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡ 24 ಗಂಟೆಗಳಲ್ಲಿ ಕುಮಾರಸ್ವಾಮಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೆ ಎಂದು ನಾನು ಭವಿಷ್ಯ ಹೇಳಿದ್ದು ನಿಜ.
ಕುಮಾರಸ್ವಾಮಿ ರಾಜೀನಾಮೆಗೆ ಮುಂದಾಗಿದ್ದೂ ನಿಜ. ಆದರೆ ಬೇರೆಯವರು ಬಾಗಿಲು ಬಂದ್ ಮಾಡಿ ಅವರನ್ನು ಒಳಗೆ ಕೂಡಿಸಿದ್ರು. ನಾನೇನು ಮಾಡಲಿ. ಭವಿಷ್ಯ ಕೇಳಿಕೊಂಡು ಬಂದು ಗೆಲ್ಲುತ್ತೇನೆ ಎಂದ ದೇವೇಗೌಡರೇ ಸೋತುಹೋದರು. ಇನ್ನು ನಮ್ಮ ಭವಿಷ್ಯ ಹೇಗೆ ಸತ್ಯವಾಗುತ್ತದೆ ಎಂದರು.