Select Your Language

Notifications

webdunia
webdunia
webdunia
webdunia

ಆಪರೇಷನ್ ಕಮಲ ತೀವ್ರ; ರಣತಂತ್ರಕ್ಕೆ ಮೊರೆಹೋದ ದೋಸ್ತಿ ನಾಯಕರು

ಆಪರೇಷನ್ ಕಮಲ ತೀವ್ರ; ರಣತಂತ್ರಕ್ಕೆ ಮೊರೆಹೋದ ದೋಸ್ತಿ ನಾಯಕರು
ಬೆಂಗಳೂರು , ಬುಧವಾರ, 29 ಮೇ 2019 (16:00 IST)
ಒಂದೆಡೆ ಬಿಜೆಪಿಯ ಆಪರೇಷನ್ ಕಮಲ ಬಿರುಸುಗೊಂಡ ಹಿನ್ನೆಲೆಯಲ್ಲಿ ಇನ್ನೊಂದೆಡೆ ಆಪರೇಷನ್ ವಿಫಲಕ್ಕೆ ದೋಸ್ತಿ ನಾಯಕರು ರಣತಂತ್ರ ರೂಪಿಸಲು ಮುಂದಾಗಿದ್ದಾರೆ.

ಸಚಿವ ಸಂಪುಟ ಪುನಾರಚನೆ ಮಾಡುವ ಮೂಲಕ ಅತೃಪ್ತರ ಶಮನ ಮಾಡಲು ಮೈತ್ರಿ ನಾಯಕರು ಮುಂದಾಗಿದ್ದಾರೆ.
ಅತೃಪ್ತ ಶಾಸಕರನ್ನು ತಣ್ಣಗೆ ಮಾಡಲು ಪ್ರಯತ್ನ ಮಾಡಲಾಗುತ್ತಿದೆ.

ಹೀಗಾಗಿ ಕೆಕೆಗೆಸ್ಟ್ ಹೌಸ್ ನಲ್ಲಿ ಹಿರಿಯ ನಾಯಕರ ಸಭೆ ನಡೆಯಿತು. ರಾಜ್ಯ ಉಸ್ತುವಾರಿ ವೇಣುಗೋಪಾಲ್, ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್, ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಭಾಗಿಯಾಗಿದ್ದರು.

ಆಪರೇಷನ್ ಕಮಲ ತಟಸ್ಥಗೊಳಿಸಲು ಚರ್ಚೆ ನಡೆಸಲಾಗಿದೆ. ಸಂಪುಟ ವಿಸ್ತರಣೆ ಇಲ್ಲ ಪುನರ್ ರಚನೆ ಮಾಡಿ ತಾತ್ಕಾಲಿಕವಾಗಿ ಉಂಟಾಗಿರುವ ಬಿಕ್ಕಟ್ಟು ಶಮನಕ್ಕೆ ಕೈಪಡೆ ರಣತಂತ್ರ ರೂಪಿಸುತ್ತಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಗುಂಡು ಹಾರಿದಾಗ ರೌಡಿ ಶೀಟರ್​​ ಮಾಡಿದ್ದೇನು: ಪಕ್ಕಾ ಶಾಕಿಂಗ್