Publish Date: Wed, 29 May 2019 (15:53 IST)
Updated Date: Wed, 29 May 2019 (15:55 IST)
ಮಹಾನಗರದ ಹೊರವಲಯದ ಪಚ್ಚನಾಡಿನಲ್ಲಿ ರೌಡಿ ಶೀಟರ್ ಒಬ್ಬ ಮಾಡಬಾರದ ಕೆಲಸ ಮಾಡಿ ಬಂಧನಕ್ಕೆ ಒಳಗಾಗಿದ್ದಾನೆ.
ರೌಡಿ ಶೀಟರ್ ನ ಮೇಲೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ ಘಟನೆ ತಡ ರಾತ್ರಿ ನಡೆದಿದೆ.
ರೌಡಿ ಉಮ್ಮರ್ ಫಾರೂಕ್ ಬಂಧಿತ ಆರೋಪಿ. ಎರಡು ಪ್ರಮುಖ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಉಮ್ಮರ್ನ್ನು ತಡರಾತ್ರಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಟೋರಿಯಸ್ ಟಾರ್ಗೆಟ್ ಗುಂಪಿನಲ್ಲಿದ್ದುಕೊಂಡು ದುಷ್ಕ್ರತ್ಯಗಳಲ್ಲಿ ಭಾಗಿಯಾಗುತ್ತಿದ್ದ ಆರೋಪಿಯನ್ನು ಹಿಡಿಯಲು ಖಚಿತ ಮಾಹಿತಿಯ ಮೇಲೆ ಬಂಧಿಸಲು ಪೊಲೀಸರು ಆತನ ಮನೆಗೆ ತೆರಳಿದ್ದಾರೆ.
ಈ ವೇಳೆ ಫಾರೂಕ್ ಶಸ್ತ್ರಾಸ್ತ್ರಗಳ ಮೂಲಕ ಪೊಲೀಸರ ಮೇಲೆ ದಾಳಿ ಮಾಡಲು ಮುಂದಾಗಿದ್ದಾನೆ. ಪೊಲೀಸರು ತಮ್ಮ ಆತ್ಮ ರಕ್ಷಣೆಗಾಗಿ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ಪೋಲೀಸರು ತಿಳಿಸಿದ್ದಾರೆ.
ಆರೋಪಿ ಫಾರೂಕ್ ಉಮ್ಮರ್ ಮಂಗಳೂರು ನಗರದ ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.