Select Your Language

Notifications

webdunia
webdunia
webdunia
webdunia

ಲವ್ ಕೇಸ್; ಯುವತಿ ತಂದೆ ಮೇಲೆ ಗುಂಡು ಹಾರಿಸಿದ ಯೋಧ

ಲವ್ ಕೇಸ್; ಯುವತಿ ತಂದೆ ಮೇಲೆ ಗುಂಡು ಹಾರಿಸಿದ ಯೋಧ
ದಾವಣಗೆರೆ , ಶನಿವಾರ, 25 ಮೇ 2019 (17:58 IST)
ಲವ್ ಕೇಸ್ ಗೆ ಸಂಬಂಧಿಸಿದಂತೆ ಯೋಧನೊಬ್ಬ ತಾನು ಪ್ರೀತಿಸುತ್ತಿದ್ದ ಹುಡುಗಿಯ ತಂದೆ ಮೇಲೆಯೇ ಗುಂಡು ಹಾರಿಸಿದ್ದಾನೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ‌ ಬಿದರಘಟ್ಟೆ ಗ್ರಾಮದಲ್ಲಿ ಘಟನೆ  ನಡೆದಿದೆ. ದೇವರಾಜ್ (27) ಗುಂಡು ಹಾರಿಸಿದ ಯೋಧನಾಗಿದ್ದಾನೆ.

ಅದೇ ಗ್ರಾಮದ ಪ್ರಕಾಶ್ ಎನ್ನುವರ ಮಗಳನ್ನು‌ ಪ್ರೀತಿಸುತ್ತಿದ್ದನು ದೇವರಾಜ್. ರಜೆ ಮೇಲೆ ಗ್ರಾಮಕ್ಕೆ ಬಂದಿದ್ದ ಯೋಧ ದೇವರಾಜ್ ಹಾಗೂ ಪ್ರೀತಿ ವಿಚಾರವಾಗಿ ಯುವತಿಯ ತಂದೆ ಪ್ರಕಾಶ್ ಜತೆ ಮಾತಿನ ಚಕಮಕಿ ನಡೆದಿದೆ.

ಕೋಪಗೊಂಡು ಪ್ರಕಾಶ್ ಎನ್ನುವರ ಮೇಲೆ ಗುಂಡು ಹಾರಿಸಿದ್ದಾನೆ ದೇವರಾಜ್. ಗುಂಡೇಟು ತಿಂದ ಪ್ರಕಾಶ್ ರನ್ನು ಶಿವಮೊಗ್ಗದ ಮೆಗ್ಗನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಯೋಧನನ್ನು ಬಂಧಿಸಿದ್ದಾರೆ ಹೊನ್ನಾಳಿ ಪೊಲೀಸರು. ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ವಾಟ್ಸಪ್ ಸ್ಟೇಟಸ್; ನಿಖಿಲ್ ಕುಮಾರಸ್ವಾಮಿ ಅಭಿಮಾನಿಗೆ ಬೆದರಿಕೆ