Publish Date: Sat, 18 May 2019 (11:50 IST)
Updated Date: Sat, 18 May 2019 (11:53 IST)
ಪ್ರೀತಿಸಲು ನಿರಾಕರಿಸಿದ ಯುವತಿಗೆ ಆತ ಮಾಡಬಾರದ್ದನ್ನು ಮಾಡಿ ಪರಾರಿಯಾಗಿದ್ದಾನೆ.
ಗಗನ ಸಖಿಯನ್ನು ಪ್ರೀತಿಸುವುದಾಗಿ ತಿಳಿಸಿದ್ದ ಕುಖ್ಯಾತ ರೌಡಿ ಅಜಯ್ ಕುಮಾರ್ ಅಲಿಯಾಸ್ ಜಾಕಿಯ ಪ್ರೀತಿಯನ್ನ ನಿರಾಕರಿಸಿದ್ದಕ್ಕೆ ಆತ ಮಾಡಬಾರದ್ದನ್ನು ಮಾಡಿದ್ದಾನೆ.
ಗಗನಸಖಿಯ ಕಿವಿ ಹರಿದು ಹಲ್ಲೆ ನಡೆಸಿದ್ದಾನೆ. ಇಂಡಿಗೋ ಏರ್ ಲೈನ್ಸ್ ನ ಗಗನ ಸಖಿ 27 ವರ್ಷದ ಯುವತಿಯನ್ನು ಬೆಂಗಳೂರಿನ ಹೆಬ್ಬಾಳ ಮೇಲುಸೇತುವೆ ಬಳಿ ಅಡ್ಡಗಟ್ಟಿ ಕ್ಯಾನ್ ನೊಳಗೆ ನುಗ್ಗಿ ಹಲ್ಲೆ ನಡೆಸಿದ್ದ.
ಯಶವಂತಪುರ ಹಾಗೂ ಕೊಡಿಗೇಹಳ್ಳಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ರೌಡಿಯನ್ನ ಬಂಧನ ಮಾಡಿದ್ದಾರೆ.
ಯುವತಿಯ ಕಿವಿ ಹರಿದು ಹೋಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಳೆ.