Select Your Language

Notifications

webdunia
webdunia
webdunia
webdunia

ನೋಟು ಅಮಾನ್ಯೀಕರಣ ಘೋಷಣೆ ವೇಳೆ ಪ್ರಧಾನಿ ಮೋದಿ ತಮ್ಮ ಕ್ಯಾಬಿನೆಟ್ ಸಚಿವರನ್ನು ಏನು ಮಾಡಿದ್ದಾರಂತೆ ಗೊತ್ತಾ?

ನೋಟು ಅಮಾನ್ಯೀಕರಣ ಘೋಷಣೆ ವೇಳೆ ಪ್ರಧಾನಿ ಮೋದಿ ತಮ್ಮ ಕ್ಯಾಬಿನೆಟ್ ಸಚಿವರನ್ನು ಏನು ಮಾಡಿದ್ದಾರಂತೆ ಗೊತ್ತಾ?
ಶಿಮ್ಲಾ , ಶನಿವಾರ, 18 ಮೇ 2019 (10:46 IST)
ಶಿಮ್ಲಾ : ದೇಶದಲ್ಲಿ ನೋಟುಗಳ ಅಮಾನ್ಯೀಕರಣ ಘೋಷಣೆ ಮಾಡುವ ವೇಳೆ ಪ್ರಧಾನಿ ಮೋದಿ ತಮ್ಮ ಕ್ಯಾಬಿನೆಟ್​ ನಲ್ಲಿರುವ ಎಲ್ಲಾ ಸಚಿವರನ್ನೂ ಕೂಡಿ ಹಾಕಿದ್ದರು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.




ಹಿಮಾಚಲ ಪ್ರದೇಶದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, “ಪ್ರಧಾನಿ ನರೇಂದ್ರ ಮೋದಿ ದೇಶದ ಮೇಲೆ ನೋಟುಗಳ ಅಮಾನ್ಯೀಕರಣದಂತಹ ಕಠಿಣ ನಿಲುವನ್ನು ಹೇರುವ ಮೊದಲು ತಮ್ಮ ಕ್ಯಾಬಿನೆಟ್​ನಲ್ಲಿನ ಎಲ್ಲಾ ಸಚಿವರನ್ನು ಪ್ರಧಾನಿ ಮಂತ್ರಿಗಳ ಮನೆಯಿರುವ ದೆಹಲಿ ರೇಸ್​ಕೋರ್ಟ್​ ರಸ್ತೆಯಲ್ಲಿರುವ ಒಂದು ಕಟ್ಟಡದಲ್ಲಿ ಕೂಡಿ ಹಾಕಿದ್ದರು. ಈ ಸಂದರ್ಭದಲ್ಲಿ ವಿಶೇಷ ರಕ್ಷಣಾ ದಳದ ಅಧಿಕಾರಿಗಳೇ ಸಚಿವರಿಗೆ ರಕ್ಷಣೆ ನೀಡಿದ್ದು, ಅವರೇ ನನಗೆ ಈ ವಿಷಯವನ್ನು ತಿಳಿಸಿದ್ದಾರೆ” ಎಂದೂ ರಾಹುಲ್ ಗಾಂಧಿ ಹೇಳಿದ್ದಾರೆ.


ಅಲ್ಲದೇ “ನೋಟು ಅಮಾನ್ಯೀಕರಣದ ತೀರ್ಮಾನದಿಂದ ಹಲವರು ಯುವಕರು ಉದ್ಯೋಗ ಕಳೆದುಕೊಂಡು ಬೀದಿ ಪಾಲಾದರೆ, ಜಿಎಸ್​ಟಿ ತೀರ್ಮಾನದಿಂದಾಗಿ ಗ್ರಾಮೀಣ ಭಾಗದ ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳು ಬಾಗಿಲು ಎಳೆದುಕೊಳ್ಳುವಂತಾಗಿತ್ತು. ಮೋದಿಯ ಈ ಎರಡು ತೀರ್ಮಾನಗಳಿಂದ ದೇಶದ ಆರ್ಥಿಕ ವ್ಯವಸ್ಥೆಗೆ ಭಾರೀ ಪೆಟ್ಟಾಗಿದೆ” ಎಂದು ಅವರು ಕಿಡಿಕಾರಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕೇದಾರನಾಥ, ಬದ್ರಿನಾಥ್ ದೇವಾಲಯಗಳಿಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ