Publish Date: Thu, 16 May 2019 (09:39 IST)
Updated Date: Thu, 16 May 2019 (09:41 IST)
ಕೋಲ್ಕೊತ್ತಾ: ಪಶ್ಚಿಮ ಬಂಗಾಲದಲ್ಲಿ ಚುನಾವಣೆ ರಣ ಕಣ ರಂಗೇರಿದ್ದು, ಮಮತಾ ಬ್ಯಾನರ್ಜಿ ಮತ್ತು ಪ್ರಧಾನಿ ಮೋದಿ ನಡುವಿನ ವಾಕ್ಸಮರ ಮುಂದುವರಿದಿದೆ.
ಮಮತಾ ಬ್ಯಾನರ್ಜಿ ಅಸಹಿಷ್ಣು ಎಂದು ಜರೆದಿರುವ ಪ್ರಧಾನಿ ಮೋದಿ ಚುನಾವಣೆ ಬಳಿಕ ಬಿಜೆಪಿ ಗೆದ್ದ ಮೇಲೆ ನನ್ನ ಭಾವಚಿತ್ರವನ್ನು ಕೆಟ್ಟದಾಗಿ ಪೈಂಟ್ ಮಾಡಿ ಗಿಫ್ಟ್ ನೀಡಿ ಎಂದು ಲೇವಡಿ ಮಾಡಿದ್ದಾರೆ.
ಪ.ಬಂಗಾಲದಲ್ಲಿ ಸಾರ್ವಜನಿಕ ಸಮಾವೇಶವೊಂದರಲ್ಲಿ ಮಾತನಾಡಿದ ಪ್ರಧಾನಿ ಮೋದಿ ಮಮತಾ ಬ್ಯಾನರ್ಜಿಯವರ ಪೈಂಟಿಂಗ್ ಪ್ರೇಮವನ್ನು ಲೇವಡಿ ಮಾಡಿದ್ದಾರೆ. ‘ನೀವು ಪೈಂಟ್ ಮಾಡಿ ಅದನ್ನು ಮಾರಿ ಕೋಟಿಗಟ್ಟಲೆ ರೂಪಾಯಿಗೆ ಮಾರುತ್ತೀರಿ. ಈಗ ನೀವು ನನ್ನದೊಂದು ಕೆಟ್ಟ ಪೈಂಟ್ ಮಾಡಿ ಮತ್ತು ಅದನ್ನು ನಾವು ಗೆದ್ದು ಬಂದ ನಂತರ ಗಿಫ್ಟ್ ಮಾಡಿ. ನಾನು ನಿಮ್ಮ ಮೇಲೆ ಕೇಸ್ ಹಾಕಲ್ಲ’ ಎಂದು ಮೋದಿ ವ್ಯಂಗ್ಯ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ