Publish Date: Tue, 14 May 2019 (07:40 IST)
Updated Date: Tue, 14 May 2019 (07:41 IST)
ನವದೆಹಲಿ: ಸ್ವ ರಾಜಕೀಯ ಹಿತಾಸಕ್ತಿಗೆ ಪತ್ನಿಗೆ ಕೈ ಕೊಟ್ಟ ಪ್ರಧಾನಿ ಮೋದಿ ಎಂದು ಟೀಕಿಸಿದ್ದ ಬಿಎಸ್ ಪಿ ನಾಯಕಿ ಮಾಯಾವತಿ ವಿರುದ್ಧ ಕೇಂದ್ರ ಸಚಿವ ಅರುಣ್ ಜೇಟ್ಲಿ ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ.
ಮಾಯಾವತಿ ತೀರಾ ಕೆಳಮಟ್ಟಕ್ಕೆ ಇಳಿದು ಮಾತನಾಡಿದ್ದಾರೆ. ಅವರು ಸಾರ್ವಜನಿಕ ಜೀವನಕ್ಕೇ ಲಾಯಕ್ಕಾದವರಲ್ಲ ಎಂದು ಜೇಟ್ಲಿ ವಾಗ್ದಾಳಿ ನಡೆಸಿದ್ದಾರೆ.
‘ಮಾಯಾವತಿ ಅವರು ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ. ಅವರ ರಾಜಕೀಯ ಸಿದ್ಧಾಂತಗಳು, ಮಾತುಗಳು ಹಿಂದೆಂದೂ ಕಾಣದಷ್ಟು ಕೆಳಮಟ್ಟಕ್ಕಿಳಿದಿದೆ. ಇವರು ಸಾರ್ವಜನಿಕ ಜೀವನಕ್ಕೇ ಲಾಯಕ್ಕಲ್ಲ’ ಎಂದು ಜೇಟ್ಲಿ ಲೇವಡಿ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
Krishnaveni K
Publish Date: Tue, 14 May 2019 (07:40 IST)
Updated Date: Tue, 14 May 2019 (07:41 IST)