ವಿದ್ಯಾರ್ಥಿಗಳಿಬ್ಬರ ಹೊಡೆದಾಟ; 9 ಜನರ ಬಂಧನ

ಭಾನುವಾರ, 26 ಮೇ 2019 (16:21 IST)
ಪೊಲೀಸರೊಂದಿಗೆ ಪಿಎಫ್ ಐ ವಿದ್ಯಾರ್ಥಿ ಸಂಘಟನೆ ಸದಸ್ಯರು ವಾಗ್ವಾದ ನಡೆಸಿದ್ದಾರೆ.

ಮೊಬೈಲ್ ಸಂದೇಶದ ವಿಚಾರವಾಗಿ ಮಂಗಳೂರಿನಲ್ಲಿ ಖಾಸಗಿ ಕಾಲೇಜೊಂದರ ವಿದ್ಯಾರ್ಥಿಗಳಿಬ್ಬರ ಜಗಳ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಕಾಂಗ್ರೆಸ್ - ಬಿಜೆಪಿ ಪಕ್ಷದ ವಿಚಾರವಾಗಿ ಸ್ಥಳೀಯ ಕಾಲೇಜೊಂದರ ವಿದ್ಯಾರ್ಥಿಗಳಿಬ್ಬರು ಹೊಡೆದಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಸಂಜೆ ಇದೇ ವಿಚಾರಕ್ಕೆ ಹೊರಗಿನ CFI ಹಾಗೂ ಪಿಎಫ್ಐ ವಿದ್ಯಾರ್ಥಿ ಸಂಘಟನೆಯ 15 ಮಂದಿ ಯುವಕರು ಪೊಲೀಸ್ ಅನುಮತಿ ಪಡೆಯದೆ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಇದಕ್ಕೆ ತಡೆಯೊಡ್ಡಿದಾಗ ಇಬ್ಬರು ಪೊಲೀಸರ ಮೇಲೆ‌ ಕೈಮಾಡಲು ಮುಂದಾಗಿದ್ದಾರೆ.

ಈವೇಳೆ ಪೊಲೀಸರು ರಕ್ಷಣೆಗಾಗಿ ಲಾಠಿ ಜಾರ್ಜ್ ಗೆ ಮುಂದಾಗಿದ್ದಾರೆ. ಹಲವರು ಲಾಠಿಗೆ ಬೆದರಿ ಪಲಾಯನಗೈದಿದ್ದು 9 ಮಂದಿಯನ್ನು ಬೆಳ್ತಂಗಡಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ರಂಗೇರುತ್ತಿದೆ ಮತ್ತೊಂದು ಚುನಾವಣೆ ಕಾವು