Select Your Language

Notifications

webdunia
webdunia
webdunia
webdunia

ರಂಗೇರುತ್ತಿದೆ ಮತ್ತೊಂದು ಚುನಾವಣೆ ಕಾವು

ನಗರಸಭೆ
ಚಿತ್ರದುರ್ಗ , ಭಾನುವಾರ, 26 ಮೇ 2019 (16:14 IST)
ಚುನಾವಣೆ ಪ್ರಚಾರದ ಕಾವು ದಿನದಿಂದ ದಿನಕ್ಕೆ ಮತ್ತೆ ಕಾವೇರತೊಡಗಿದೆ.

ಚಿತ್ರದುರ್ಗದಲ್ಲಿ ದಿನದಿಂದ ದಿನಕ್ಕೆ ಹಿರಿಯೂರು ನಗರಸಭೆ ಚುನಾವಣಾ ಪ್ರಚಾರದ ಕಾವು ರಂಗೇರುತ್ತಿದೆ. ಅಂದ ಹಾಗೆ ಹಿರಿಯೂರು ನಗರಸಭಾ   29 ನೇ ವಾರ್ಡಿನಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ನಾಗೇಂದ್ರ ನಾಯ್ಕ ಮತ್ತು ಅಭ್ಯರ್ಥಿ ರವಿಚಂದ್ರ ನಾಯ್ಕ ಅಬ್ಬರದ ಪ್ರಚಾರ ನೆಡೆಸಿ ಮತಯಾಚಿಸಿದರು.

ಮತ್ತೊಂದು ಕಡೆ 13 ನೇ ವಾರ್ಡಿನಲ್ಲಿ ಈ. ಮಂಜುನಾಥ್ ಪರವಾಗಿ ಮಾಜಿ ಸಚಿವ ಡಿ. ಸುಧಾಕರ್ ಮತಯಾಚನೆ ಮಾಡಿದರು.

 ನಂತರ ಮಾತನಾಡಿದ ಸುಧಾಕರ್,  ಇದೇ ತಿಂಗಳ 29 ರಂದು ನೆಡೆಯುವ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.

ಇದೇ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ. ಯಶೋಧರ, ಹಾಲಿ ಸದಸ್ಯ ಎ. ಪಾಂಡುರಂಗ ಸೇರಿದಂತೆ ಮತ್ತಿತರರು ಪ್ರಚಾರದಲ್ಲಿ ತೊಡಗಿದ್ದರು.




Share this Story:

Follow Webdunia kannada

ಮುಂದಿನ ಸುದ್ದಿ

ವೀರ ಮರಣ ಹೊಂದಿದ ಯೋಧ