ಮಂಡ್ಯ: ಸುಮಲತಾ ಅಂಬರೀಶ್ ಪರ ಮಂಡ್ಯದ ವಿವಿದೆಡೆ ಪ್ರಚಾರ ನಡೆಸುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಅಭಿಮಾನಿಗಳು ವಿವಿಧ ಬೇಡಿಕೆಗಳನ್ನಿಡುತ್ತಿರುವುದು ಸಾಮಾನ್ಯವಾಗಿದೆ.
ಈ ನಡುವೆ ರೋಡ್ ಶೋ ವೇಳೆ ಅಭಿಮಾನಿ ಯುವತಿಯೊಬ್ಬಳು ದರ್ಶನ್ ಬಳಿ ಒಂದು ಡೈಲಾಗ್ ಹೇಳಿ ಎಂದು ಮನವಿ ಮಾಡಿದ್ದಾಳೆ. ಇದಕ್ಕೆ ದರ್ಶನ್ ಕೊಟ್ಟ ಉತ್ತರ ನೋಡಿ ಅಲ್ಲಿದ್ದವರು ನಗೆಗಡಲಲ್ಲಿ ತೇಲುವಂತೆ ಮಾಡಿದೆ.
ಖಂಡಿತಾ.. ಡೈಲಾಗ್ ಏನು? ಮೊದಲು ಸುಮಲತಾ ಅಮ್ಮಂಗೆ ಓಟು ಹಾಕಿ ಗೆಲ್ಲಿಸಿ. ಆ ಮೇಲೆ ನಿನ್ನ ಜತೆ ಡ್ಯುಯೆಟ್ಟೇ ಹಾಡ್ತೀನಿ ಬಿಡು ಎಂದು ದರ್ಶನ್ ಯುವತಿಗೆ ಹೇಳಿದ್ದಾರೆ. ದರ್ಶನ್ ಮಾತು ಕೇಳಿ ಅಲ್ಲಿದ್ದವರ ಮೊಗದಲ್ಲಿ ನಗುವೋ ನಗು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ