ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಗೆ ಆಪತ್ತು ಇದೆ ಅಂತ ನಟ ಯಶ್ ಅಭಿಮಾನಿಗಳು ಹೇಳಿದ್ದಾರೆ.
ಮಂಡ್ಯದ ಮಲ್ಲನಕುಪ್ಪೆಯಲ್ಲಿ ಯಶ್ ಪ್ರಚಾರ ನಡೆಸಿದ್ರು. ದೊಡ್ಡರಸಿನಕೆರೆ, ಚಿಕ್ಕರಸಿನ ಎಲ್ಲೇ ಹೋದರೂ ಜಗತ್ತಿನಲ್ಲಿ ಮದ್ದೂರು ವಡೆ ಫೇಮಸ್ ಆಗಿದೆ. ಫೈವ್ ಸ್ಟಾರ್ ಹೋಟೆಗಳಲ್ಲೂ ಮದ್ದೂರು ವಡೆ ಅಂತ ಬೋರ್ಡ್ ಹಾಕಿದ್ದಾರೆ. ಕಾರಣ ನಮ್ಮತನ ಅದು ಅಂತ.
									
			
			 
 			
 
 			
					
			        							
								
																	ಅದೇ ರೀತಿ ಅಂಬರೀಶಣ್ಣ ಮಂಡ್ಯದಿಂದ ಇಂಡಿಯಾಗೆ ಫೇಮಸ್ಸು ಆಗಿದ್ದಾರೆ. ನಮ್ಮತನ ಫಿಜ್ಜಾ ಬರ್ಗರ್‌ಗೆ ಆಸೆ ಬಿದ್ರೆ ನಮ್ ಕಥೆ ಮುಗೀತು. ಮದ್ದೂರು ವಡೆ ನಮ್ಮ ಸ್ವಾಭಿಮಾನ ಮರೆಯಬಾರದು ಎಂದರು.
									
										
								
																	ಅದೇ ರೀತಿ ಮಂಡ್ಯದ ಗಂಡು ಅಂಬರೀಶ್, ಮಂಡ್ಯದ ಗೌಡ್ತಿ ಸುಮಕ್ಕ ಎಂದ ಅವರು, ಸುಮಲತಾ ಗೌಡ್ತಿನೇ ಅಲ್ಲ, ಹೊರಗಿನವರು ಅಂತ ಬಿಂಬಿಸಲು ಹೋದ್ರೆ ಜನ ಮೂರ್ಖರಲ್ಲ. ಮನಸ್ಸು ಶುದ್ಧಿಯಾಗಿದ್ದಾಗ ಅಂಥ ವಾಯ್ಸ್ ಬರುತ್ತೆ.
ಧೈರ್ಯ ಮಾಡಿ ಹೆಣ್ಣು ಮಗಳೊಬ್ಬಳು ಚುನಾವಣೆ ಬಂದಿದ್ದಾರೆ ಅವರನ್ನ ಬೆಂಬಲಿಸಿ ಎಂದರು.
									
											
							                     
							
							
			        							
								
																	ಉದ್ದೇಶಪೂರ್ವಕವಾಗಿ ನಾಲ್ಕು ಜನ ಸುಮಲತಾ ಎಂಬ ಮಹಿಳೆಯರನ್ನ ಕಣಕ್ಕಿಳಿಸಿದ್ದಾರೆ ಎಂದ ಯಶ್, ಯಾರೂ  ಗೊಂದಲಕ್ಕೊಳಗಾಗದೆ ಕ್ರಮಸಂಖ್ಯೆ ೨೦ ಕ್ಕೆ ಮತ ಹಾಕಿ ಎಂದರು. ಆಗ ಕ್ರಮ ಸಂಖ್ಯೆ 20 ಎಂದಾಗ ಕುಮಾರಸ್ವಾಮಿಗೆ ಆಪತ್ತು ಅಂತ ಯಶ್ ಅಭಿಮಾನಿಗಳು ಕೂಗಿದ್ರು.