Select Your Language

Notifications

webdunia
webdunia
webdunia
webdunia

ಐಟಿ ಅಧಿಕಾರಿಗೆ ಬಹಿರಂಗವಾಗಿ ಧಮ್ಕಿ ಹಾಕಿದ ಸಿಎಂ ಕುಮಾರಸ್ವಾಮಿ

ಐಟಿ ಅಧಿಕಾರಿಗೆ ಬಹಿರಂಗವಾಗಿ ಧಮ್ಕಿ ಹಾಕಿದ ಸಿಎಂ ಕುಮಾರಸ್ವಾಮಿ
ಬೆಂಗಳೂರು , ಬುಧವಾರ, 10 ಏಪ್ರಿಲ್ 2019 (09:06 IST)
ಬೆಂಗಳೂರು : ಮಂಡ್ಯಗೆ 300 ಜನ ಕಳಿಸಿದೆ ರೇಡ್ ಮಾಡಿಸುತ್ತೀಯಾ? ಎಲ್ಲಿದ್ದೀಯಾಪ್ಪಾ ಬಾಲಕೃಷ್ಣ ಎಂದು ಸಿಎಂ ಕುಮಾರಸ್ವಾಮಿ ಅವರು ಆದಾಯ ತೆರಿಗೆ ಇಲಾಖೆ ಮಖ್ಯಸ್ಥ ಬಾಲಕೃಷ್ಣ ಅವರಿಗೆ ಏಕವಚನದಲ್ಲಿ ಪ್ರಶ್ನಿಸಿ ಧಮ್ಕಿ ಹಾಕಿದ್ದಾರೆ.


ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಹರಿಪ್ರಸಾದ್ ಪರ ನಗರದ ವಿದ್ಯಾಪೀಠ ಸರ್ಕಲ್ ನಲ್ಲಿ ಬಹಿರಂಗ ಪ್ರಚಾರ ಸಭೆ ಉದ್ದೇಶಿ ಮಾತನಾಡಿದ ಸಿಎಂ, ಕರ್ನಾಟಕದಲ್ಲಿ ಜನತೆಯ ವಿಶ್ವಾಸ ಗಳಿಸಿ ಆಡಳಿತ ನಡೆಸುತ್ತಿದ್ದು, ನಮ್ಮ ಜೊತೆ ಚೆಲ್ಲಾಟ ಆಡಬೇಡಿ ಎಂದು ಹೇಳಿದ ಅವರು, ಬಾಲಕೃಷ್ಣ ಕೊಟ್ಟಿರುವ ದೂರು ಬಿಜೆಪಿ ಹೆಡ್ ಕ್ವಾಟ್ರಸ್ ನಲ್ಲಿ ಟೈಪ್ ಮಾಡಿರುವುದು ಎಂದು ದೂರಿದ್ದಾರೆ.


ಅಲ್ಲದೇ ಶ್ರೀಕಾಂತ್ ಎಂಬವರು ನನ್ನ ಮನೆಗೆ ಬಂದು ಹೋದಾಗ, 30 ಜನ ಐಟಿ ಅವರು ಅವರನ್ನ ತಪಾಸಣೆ ಮಾಡಿದರು. ಫೋನ್ ಚೆಕ್ ಮಾಡಿದ್ದೀರಿ ಇದನೆಲ್ಲಾ ಏಕೆ ಮಾಡಿದ್ರಿ. ಬಾಲಕೃಷ್ಣನ್ನ ರಾಜ್ಯಪಾಲ ಮಾಡುತ್ತಾರೆ, ಅದಕ್ಕೆ ಹೀಗೆಲ್ಲ ಮಾಡುತ್ತಿದ್ದಾನೆ ಎಂದು ಆರೋಪಿಸಿದ್ದಾರೆ.


ಹಾಗೇ ಮೋದಿ ಹಿಟ್ಲರ್ ಆಗಿದ್ದು ದೇಶವನ್ನ ಹಾಳು ಮಾಡುತ್ತಿದ್ದಾನೆ. ಡಿಕ್ಟೇಟರ್ ಕ್ಕಿಂತ ಕೆಟ್ಟವನು ಎಂದು ಪ್ರಧಾನಿ ಮೋದಿ ವಿರುದ್ಧವೂ ಸಿಎಂ ಏಕವಚನ ದಲ್ಲಿ ವಾಗ್ದಾಳಿ ನಡೆಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ಪಾರ್ಲಿಮೆಂಟ್ ಹೊರಗೆ ಹುಲಿಯಂತಿದ್ದರೆ, ಒಳಗೆ ಇಲಿಯಂತೆ ಇರುತ್ತಾರೆ-ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯ