Publish Date: Sat, 06 Apr 2019 (10:23 IST)
Updated Date: Sat, 06 Apr 2019 (10:25 IST)
ಉಡುಪಿ : ಪುಲ್ವಾಮಾ ದಾಳಿಯ ಬಗ್ಗೆ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಬಿಜೆಪಿ ನಾಯಕ ಶ್ರೀನಿವಾಸಪೂಜಾರಿ ಅವರು ವ್ಯಂಗ್ಯವಾಡುವುದರ ಮೂಲಕ ತಿರುಗೇಟು ನೀಡಿದ್ದಾರೆ.
ಭಾರತ, ಪಾಕ್ ನಡುವಿನ ಸಂಘರ್ಷದ ಬಗ್ಗೆ 2 ವರ್ಷದ ಹಿಂದೆಯೇ ತಿಳಿದಿತ್ತು ಎಂದು ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀನಿವಾಸಪೂಜಾರಿ, ಸಿಎಂ ಕುಮಾರಸ್ವಾಮಿ ಅವರು ನೀಚ ಚಟುವಟಿಕೆ ಮಾಡುತ್ತಿದ್ದಾರೆ. ನಿಮ್ಮಣ್ಣ ರೇವಣ್ಣ ಪಾಕ್ ಸಂಘರ್ಷದ ಬಗ್ಗೆ ಭವಿಷ್ಯ ಹೇಳಿದ್ದರಾ? ಎಡಗೈಯಲ್ಲಿ ನಾಲ್ಕು, ಬಲಗೈಯಲ್ಲಿ ನಾಲ್ಕು ನಿಂಬೆ ಹಣ್ಣು ಹಿಡಿದುಕೊಂಡು ಭವಿಷ್ಯ ಹೇಳಿರಬಹುದು ಎಂದು ವ್ಯಂಗ್ಯವಾಡಿದ್ದಾರೆ.
ಪುಲ್ವಾಮಾ ಘಟನೆ ಬಗ್ಗೆ ಮೊದಲೇ ಗೊತ್ತಿದ್ದರೆ ಸಿಎಂ ಎರಡು ವರ್ಷದ ಹಿಂದೇನೆ ಹೇಳಬೇಕಿತ್ತು. ಈಗ ಚುನಾವಣೆ ಸಂದರ್ಭದಲ್ಲಿ ಹೇಳುವ ಅಗತ್ಯ ಏನಿತ್ತು? ಎಂದು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಮೈತ್ರಿಯೆಂಬ ತೇಪೆಯೊಳಗೆ ಎಲ್ಲಾ ಒಡೆದಿದೆ. ಮಂಡ್ಯದಲ್ಲಿ ತಮ್ಮ ಮಗ ಗೆಲ್ಲುವುದಿಲ್ಲ ಎಂದು ಸಿಎಂ ಕುಮಾರಸ್ವಾಮಿಗೆ ಗೊತ್ತಾಗಿದೆ. ತುಮಕೂರು,ಹಾಸನ ಗೆಲುವು ಕೂಡ ಕಷ್ಟವಿದೆ ಎಂದು ಅವರಿಗೆ ಅವರಿವಾಗಿದೆ ಎಂದು ಅವರು ಲೇವಡಿ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ