Publish Date: Wed, 10 Apr 2019 (16:28 IST)
Updated Date: Wed, 10 Apr 2019 (16:30 IST)
ಮೈತ್ರಿ ಪಕ್ಷಗಳು ಒಂದೆಡೆ, ಬಿಜೆಪಿ ಮತ್ತೊಂದೆಡೆ ರಣಕಹಳೆ ಮೊಳಗಿಸಿರುವ ನಡುವೆಯೇ ಬಿಎಸ್ಪಿ ಕೂಡ ಅಖಾಡಕ್ಕೆ ಧುಮುಕಿದ್ದು ಬೃಹತ್ ಸಮಾವೇಶ ಹಮ್ಮಿಕೊಂಡಿದೆ.
ಮೈಸೂರಿಗೆ ಆಗಮಿಸಿ ಬಿಎಸ್ಪಿ ನಾಯಕಿ ಮಾಯಾವತಿ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ವಿಶೇಷ ವಿಮಾನದ ಮೂಲಕ ಮೈಸೂರಿನ ಮಂಡಕಹಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮಾಯಾವತಿ ಅವರು ಮೈಸೂರಿನ ರ್ಯಾಡಿಷನ್ ಬ್ಲ್ಯೂ ಹೋಟೆಲ ನಲ್ಲಿ ವಾಸ್ತವ್ಯ ಹೂಡಿದ್ದಾರೆ.
ಪಕ್ಷದ ಸ್ಥಳೀಯ ಮುಖಂಡರ ಜೊತೆ ಸಮಾಲೋಚನೆ ನಡೆಸಿರುವ ಅವರು, ಚಾಮರಾಜನಗರ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳು, ಪಕ್ಷದ ಮುಖಂಡರ ಜೊತೆ ಮಾತುಕತೆ ನಡೆಸಿ ಪ್ರಚಾರ ನಡೆಸಲಿದ್ದಾರೆ.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ಬಿಎಸ್ಪಿ ಬೃಹತ್ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.