ಬೆಂಗಳೂರು : ನಟಿ ಖುಷ್ಪೂ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಸ್ಟಾರ್ ಪ್ರಚಾರಕ್ಕೆ ಇಳಿದ ವೇಳೆ ಯುವಕನೊಬ್ಬನ ಕಪಾಳಕ್ಕೆ ಹೊಡೆದ ಘಟನೆ ನಡೆದಿದೆ.
ಬೆಂಗಳೂರಿನ ಹೊಯ್ಸಳ ನಗರ, ಶಾಂತಿನಗರ ಸೇರಿದಂತೆ ಬೆಂಗಳೂರು ಕೇಂದ್ರ ಲೋಕಸಭಾ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಚುನಾವಣಾ ಪ್ರಚಾರದಲ್ಲಿ ತೊಡಿಗಿದ್ದರು. ಆ ವೇಳೆ ಅವರ ಜೊತೆ ನಟಿ ಖುಷ್ಪೂ ಕೂಡ ಪ್ರಚಾರ ಕಾರ್ಯಕ್ಕೆ ಇಳಿದಿದ್ದಾರೆ.
ಈ ವೇಳೆ ನಟಿ ಖುಷ್ಬೂ ಅವರ ಜೊತೆ ಯುವಕನೋರ್ವ ಸೊಂಟ ಮುಟ್ಟಿ ಅನುಚಿತವಾಗಿ ವರ್ತಿಸಿದ ಕಾರಣ, ಸಿಟ್ಟಿನಿಂದಲೇ ಯುವಕನ ಕಡೆಗೆ ತಿರುಗಿ ಆತನ ಕೆನ್ನೆಗೆ ಬಾರಿಸಿದ್ದಾರೆ. ಆಗ ಅಲ್ಲಿದ್ದ ಕಾರ್ಯಕರ್ತರು, ಖುಷ್ಬೂವನ್ನು ಸಮಾಧಾನಿಸಿದ್ದಲ್ಲದೇ, ಅನುಚಿತವಾಗಿ ವರ್ತಿಸಿದ ಯುವಕನನ್ನು ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.