Publish Date: Fri, 31 May 2019 (17:33 IST)
Updated Date: Fri, 31 May 2019 (17:34 IST)
ರಾಜ್ಯದಲ್ಲಿ ಯಾವ ಆಪರೇಷನ್ ನಡೆಯೋದಿಲ್ಲ. ಯಾವ ಆಪರೇಷನ್ ಕೂಡ ಆಗೋದಿಲ್ಲ ಅಂತ ಗೃಹ ಸಚಿವ ಹೇಳಿದ್ದಾರೆ.
ಮೈತ್ರಿ ಸರ್ಕಾರ ಸುಭದ್ರವಾಗಿರುತ್ತೆ. ನಾಲ್ಕು ವರ್ಷ ಹೆಚ್.ಡಿ. ಕುಮಾರಸ್ವಾಮಿ ಸಿಎಂ ಆಗಿಯೇ ಆಡಳಿತ ನಡೆಸ್ತಾರೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಬಿಜೆಪಿಯವರು ಹಗಲುಗನಸು ಕಾಣ್ತಿದ್ದಾರೆ. ಬಿಜೆಪಿಯವರಿಗೆ ವಿರೋಧ ಪಕ್ಷದ ಸ್ಥಾನ ಕೊಟ್ಟಿದ್ದಾರೆ.
ಅವರು ಮರ್ಯಾದೆಯಿಂದ ಗೌರವಯುತವಾಗಿ ಅದೇ ಸ್ಥಾನದಲ್ಲಿ ಇರಲಿ. ಮುಂದೆ ಚುನಾವಣೆ ಬಂದಾಗ ಏನು ಮಾಡಬೇಕೋ ಮಾಡಲಿ. ಆಗ ಜನಾದೇಶಕ್ಕೆ ಒಪ್ಪೋಣ. ಸದ್ಯಕ್ಕಂತೂ ಆಪರೇಷನ್ ಕಮಲ ಆಪರೇಷನ್ ಆಗಿಯೇ ಉಳಿಯುತ್ತೆ ಹೀಗಂತ ಗೃಹಸಚಿವ ಎಂ.ಬಿ.ಪಾಟೀಲ್ ಹೇಳಿಕೆ ನೀಡಿದ್ದಾರೆ.