Select Your Language

Notifications

webdunia
webdunia
webdunia
webdunia

ಸಚಿವ ಸ್ಥಾನ ಕಳೆದುಕೊಂಡ ಸುಷ್ಮಾ ಸ್ವರಾಜ್ ರಿಂದ ಪ್ರಧಾನಿ ಮೋದಿಗೆ ಕೃತಜ್ಞತೆ

ಸಚಿವ ಸ್ಥಾನ ಕಳೆದುಕೊಂಡ ಸುಷ್ಮಾ ಸ್ವರಾಜ್ ರಿಂದ ಪ್ರಧಾನಿ ಮೋದಿಗೆ ಕೃತಜ್ಞತೆ
ನವದೆಹಲಿ , ಶುಕ್ರವಾರ, 31 ಮೇ 2019 (12:29 IST)
ನವದೆಹಲಿ: ನರೇಂದ್ರ ಮೋದಿ ಅವರು ಎರಡನೇ ಬಾರಿ ಪ್ರಧಾನಿಯಾಗಿ  ಗುರುವಾರ ಪ್ರಮಾಣ ಸ್ವೀಕರಿಸಿದ್ದು, ಆ ವೇಳೆ ಅವರ ನೇತೃತ್ವದ ಸರ್ಕಾರದ  ಸಚಿವ ಸ್ಥಾನಗಳ ಹಂಚಿಕೆಯಾಗಿದೆ.




ಈ ಹಿಂದೆ ಮೋದಿ ಸರ್ಕಾರದಲ್ಲಿ ವಿದೇಶಾಂಗ ವ್ಯವಹಾರ ಖಾತೆ ಸಚಿವೆಯಾಗಿದ್ದ ಸುಷ್ಮಾ ಸ್ವರಾಜ್ ನರೇಂದ್ರ ಮೋದಿಯವರ ಎರಡನೇ ಅವಧಿಯ ಸರ್ಕಾರದಲ್ಲಿ ಸಚಿವ ಸ್ಥಾನ ಕಳೆದುಕೊಂಡಿದ್ದು, ಇದೀಗ ಈ ಕುರಿತು ಟ್ವೀಟ್ ಮೂಲಕ ವಿದಾಯದ ಹೇಳಿದ್ದಾರೆ.


ಕಳೆದ ಐದು ವರ್ಷಗಳ ಕಾಲ ವಿದೇಶಾಂಗ ವ್ಯವಹಾರ ಖಾತೆ ಸಚಿವರಾಗಿ ದೇಶದ ಜನರ ಸೇವೆ ಮಾಡಲು ಅವಕಾಶ ನೀಡಿದ ಪ್ರತಿಯೊಬ್ಬರಿಗೆ ಕೃತಜ್ಞತೆಗಳು. ಭಾರತೀಯ, ಅನಿವಾಸಿ ಭಾರತೀಯರಿಗೆ ಐದು ವರ್ಷಗಳ ಕಾಲ ಸೇವೆ ಸಲ್ಲಿಸಲು ಅವಕಾಶ ಕೊಟ್ಟ ನರೇಂದ್ರ ಮೋದಿಯವರಿಗೆ ಕೃತಜ್ಞತೆ ಹೇಳಿದ ಸುಷ್ಮಾ ಸ್ವರಾಜ್ 'ನಾನು ನಿಮಗೆ ಕೃತಜ್ಞಳಾಗಿದ್ದೇನೆ, ಸರ್ಕಾರ ಅದ್ಭುತವಾಗಿ ಮುನ್ನಡೆಯಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ' ಎಂದು ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಮಂಡ್ಯ ಲೋಕಲ್ ವಾರ್ ನಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದ ಜೆಡಿಎಸ್ ಗೆ ಗೆಲುವು