Select Your Language

Notifications

webdunia
webdunia
webdunia
webdunia

ಸದಾನಂದಗೌಡರಿಗೆ ಮೋದಿ ಸಂಪುಟದಲ್ಲಿ ಸೀಟ್ ಪಕ್ಕಾ

ಸದಾನಂದಗೌಡರಿಗೆ ಮೋದಿ ಸಂಪುಟದಲ್ಲಿ ಸೀಟ್ ಪಕ್ಕಾ
ನವದೆಹಲಿ , ಗುರುವಾರ, 30 ಮೇ 2019 (12:40 IST)
ನವದೆಹಲಿ : ನರೇಂದ್ರ ಮೋದಿ ಕ್ಯಾಬಿನೆಟ್ 2.0 ರಹಸ್ಯ ಬಹಿರಂಗವಾಗಿದ್ದು, ಮಿತ್ರ ಪಕ್ಷಗಳಿಗೆ ಕೇವಲ ಒಂದೊಂದು ಸ್ಥಾನ ಸೀಮಿತವಾಗಿಡಲಾಗಿದೆ ಎಂಬುದಾಗಿ ತಿಳಿದುಬಂದಿದೆ.




ಈಗಾಗಲೇ ದೆಹಲಿಯ ಕರ್ನಾಟಕ ಭವನದಲ್ಲಿ ಸಂಸದರು ಬೀಡು ಬಿಟ್ಟಿದ್ದು, ಇದೀಗ ಸಚಿವರ ಪಟ್ಟಿಯಲ್ಲಿರುವ ಸಂಸದರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕರೆ ಸಚಿವ ಸ್ಥಾನದ ಬಗ್ಗೆ ಮಾಹಿತಿ ನೀಡಿದ್ದಾರೆ. ಇದೀಗ ಡಿ.ವಿ.ಸದಾನಂದಗೌಡರಿಗೆ ಪ್ರಧಾನಿ ಕಾರ್ಯಾಲಯದಿಂದ ಕರೆ ಬಂದಿದ್ದು, ಆ ಮೂಲಕ  ಡಿ.ವಿ.ಸದಾನಂದಗೌಡರಿಗೆ ಮೋದಿ ಸಂಪುಟದಲ್ಲಿ ಸೀಟ್ ಪಕ್ಕಾ ಎನ್ನಲಾಗಿದೆ.


ಸಂಜೆ 7 ಗಂಟೆಗೆ ಮೋದಿ ಪ್ರಮಾಣವಚನ ಸ್ವೀಕರಿಸಲಿದ್ದು, ಅಂದೇ ಡಿವಿಎಸ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ. ಅಮಿತ್ ಶಾ ಕರೆ ಮಾಡಿರುವ ಬಗ್ಗೆ ಈಗಾಗಲೇ ಡಿ.ವಿ.ಸದಾನಂದಗೌಡರು ಮಾಧ್ಯಮಕ್ಕೆ  ಖಚಿತಪಡಿಸಿದ್ದಾರೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಮತ್ತೊಮ್ಮೆ ಪ್ರಧಾನಿಯಾಗುತ್ತಿರುವ ಹಿನ್ನಲೆ; ಒಡೆದ ಗಾಜುಗಳ ಮೇಲೆ ನಡೆದು ಹರಕೆ ತೀರಿಸಿದ ಅಭಿಮಾನಿ