Select Your Language

Notifications

webdunia
webdunia
webdunia
webdunia

ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ಹಿರಿಯ ಸದಸ್ಯ ಸಂತೋಷ್ ಗಂಗ್ವಾರ್ ನೇಮಕ

ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ಹಿರಿಯ ಸದಸ್ಯ ಸಂತೋಷ್ ಗಂಗ್ವಾರ್ ನೇಮಕ
ನವದೆಹಲಿ , ಗುರುವಾರ, 30 ಮೇ 2019 (12:02 IST)
ನವದೆಹಲಿ : ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ಹಿರಿಯ ಸದಸ್ಯ ಸಂತೋಷ್ ಗಂಗ್ವಾರ್ ಅವರನ್ನು ನೇಮಿಸಲಾಗಿದೆ.
ಸಂಪ್ರದಾಯದಂತೆ ನೂತನ ಸಂಸದರ ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲಿ ಹಂಗಾಮಿ ಸ್ಪೀಕರ್ ನೇಮಿಸುವುದು ವಾಡಿಕೆ. ಅದರಂತೆ ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಗಂಗ್ವಾರ್ ಅವರ ಹೆಸರನ್ನು ಅಂಕಿತಗೊಳಿಸಿ ಆದೇಶ ಹೊರಡಿಸಿದ್ದಾರೆ.





ಲೋಕಸಭೆಯಲ್ಲಿ ನೂತನ ಸದಸ್ಯರು ಇವರ ನೇತೃತ್ವದಲ್ಲಿ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಹಾಗೇ ಹಂಗಾಮಿ ಸ್ಪೀಕರ್ ಆಗಿರುವ ಅವರನ್ನೇ ಲೋಕಸಭೆಯ ಪೂರ್ಣಾವಧಿಗೆ ಸ್ಪೀಕರ್ ಆಗಿ ನೇಮಕ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂಬುದಾಗಿ ತಿಳಿದುಬಂದಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಚಿವರ ಪಟ್ಟಿಯಲ್ಲಿರುವ ಸಂಸದರಿಗೆ ಅಮಿತ್ ಶಾರಿಂದ ಕರೆ