Publish Date: Mon, 27 May 2019 (16:53 IST)
Updated Date: Mon, 27 May 2019 (16:55 IST)
ಇಂದು ರಾಜಕಾರಣ ಕೆಟ್ಟು ಹೋಗಿದೆ. ಜನ ಕೆಟ್ಟುಹೋಗಿಲ್ಲ. ನಮ್ಮ ಬಳಿ ಹೆಚ್ಚು ಹಣ ಇದೆ ಅಂತ ನೀವೇ ಕೊಡ್ತೀರಾ ಜನ ತೆಗೆದುಕೊಳ್ಳುವುದರಲ್ಲಿ ತಪ್ಪೇನಿದೆ? ಹೀಗಂತ ರಮೇಶ ಕುಮಾರ ಆಕ್ರೋಶ ಹೊರಹಾಕಿದ್ದಾರೆ.
ನಾನು ಹತ್ತು ಚುನಾವಣೆ ಎದುರಿಸಿದ್ದೇನೆ. ಆರು ಚುನಾವಣೆ ಗೆದ್ದಿದ್ದೇನೆ. ನಾಲ್ಕು ಚುನಾವಣೆಗಳಲ್ಲಿ ಸೋತಿದ್ದೇನೆ. ನಾನು ಬ್ರಾಹ್ಮಣ . ನಮ್ಮ ಶ್ರೀನಿವಾಸಪುರದಲ್ಲಿ ಸಾವಿರ ಮತಗಳು ಇರಬಹುದು. ಅದ್ರೂ ನಾನು ಚುನಾವಣೆ ಗೆದ್ದಿದ್ದೇನೆ, ಸೋತಿದ್ದೇನೆ ಎಂದರು.
ಇಂದು ರಾಜಕಾರಣ ಕೆಟ್ಟು ಹೋಗಿದೆ. ಜನ ಕೆಟ್ಟುಹೋಗಿಲ್ಲ.
ನಮ್ಮ ಬಳಿ ಹೆಚ್ಚು ಹಣ ಇದೆ ಅಂತ ನೀವೇ ಕೊಡ್ತೀರಾ ಜನ ತೆಗೆದುಕೊಳ್ಳುವುದರಲ್ಲಿ ತಪ್ಪೇನಿದೆ? ನಮ್ಮ ಮನೆಯಲ್ಲಿ ಇಷ್ಟು ಮತ ಇವೆ. ಇಷ್ಟು ದುಡ್ಡು ಕೊಡಬೇಕು ಅಂತ ಕೇಳಲ್ಲ. ಅದ್ರೆ ನೀವು ಬಲವಂತ ಮಾಡಿ ಕೊಟ್ರೆ ಅವರು ತೆಗೆದುಕೊಳ್ಳುವುದರಲ್ಲಿ ತಪ್ಪೇನಿದೆ? ಹೀಗಂತ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ರಮೇಶ್ ಕುಮಾರ್.