Publish Date: Mon, 27 May 2019 (16:46 IST)
Updated Date: Mon, 27 May 2019 (16:48 IST)
ರಾಜ್ಯದ ಮೈತ್ರಿ ಸರ್ಕಾರ ಅಸ್ಥಿರಗೊಳ್ಳುವ ಪ್ರಶ್ನೆಯೇ ಇಲ್ಲ. ಆಪರೇಷನ್ ಕಮಲದ ಯಾವುದೇ ಭಯ ಇಲ್ಲ. ಹೀಗಂತ ಕೆಪಿಸಿಸಿ ಅಧ್ಯಕ್ಷ ಹೇಳಿದ್ದಾರೆ.
ಸಚಿವ ಸಂಪುಟ ಪುನಾರಚನೆ ಬಗ್ಗೆ ಪ್ರಾಥಮಿಕ ಚರ್ಚೆಯಾಗಿದೆಯಷ್ಟೇ. ಇನ್ನೂ ತೀರ್ಮಾನವಾಗಿಲ್ಲ. ಅತೃಪ್ತರನ್ನು ಮನವೊಲಿಸುವುದು ಅನ್ನುವುದಲ್ಲ. ಯಾರಿಗೆ ಅವಶ್ಯಕತೆಯಿದೆಯೋ ಅವರಿಗೆ ಕೊಡುತ್ತೇವೆ. ಹೀಗಂತ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ನಮ್ಮ ಸರ್ಕಾರ ಭದ್ರವಾಗಿದೆ. ಇನ್ನೂ ಭದ್ರಗೊಳಿಸಲು ಮಂತ್ರಿಗಳೆಲ್ಲ ಸೇರಿ ಕೆಲಸ ಮಾಡುತ್ತೇವೆ. ರಾಜ್ಯದ ಅಭಿವೃದ್ಧಿ ಮುಖ್ಯ. ಸರ್ಕಾರ ಇರುತ್ತದೆಯೋ ಇಲ್ಲವೋ? ಯಾರು ಯಾರ ಮನೆಗೆ ಹೋದರು ಎನ್ನುವುದಷ್ಟೇ ಚರ್ಚೆಯಾಗುತ್ತಿದೆಯಷ್ಟೆ. ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.
ಈ ಬಗ್ಗೆ ಸಚಿವರ ಜೊತೆ ಚರ್ಚೆ ಮಾಡಿದ್ದೇವೆ . ಸರ್ಕಾರದ ಯೋಜನೆಗಳು ಕಾರ್ಯಕ್ರಮಗಳು ಜನರನ್ನು ತಲುಪಬೇಕು. ಸರ್ಕಾರ ಅಳಿವು ಉಳಿವಿವ ಪ್ರಶ್ನೆಯೇ ಇಲ್ಲ. ಸರ್ಕಾರ ಭದ್ರವಾಗಿದೆ ಎಂದರು.