Publish Date: Mon, 27 May 2019 (16:37 IST)
Updated Date: Mon, 27 May 2019 (16:38 IST)
ಯಾವ ಆಪರೇಷನ್? ಅದರ ಬಗ್ಗೆ ನಮಗೇನೂ ಗೊತ್ತಿಲ್ಲ. ಹೀಗಂತ ಬಿಜೆಪಿ ನೂತನ ಸಂಸದ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸ್ಪೀಕರ್ ಭೇಟಿ ಮಾಡಲಿಕ್ಕೆ ಬಂದಿರುವೆ. ಆಪರೇಶನ್ ಬಗ್ಗೆ ನನಗೇನೂ ಗೊತ್ತಿಲ್ಲ. ಸರ್ಕಾರ ಅಲುಗಾಡುತ್ತಿದೆ ಅಂತ ನಿಮಗೂ ಗೊತ್ತಿದೆ ನನಗೂ ಗೊತ್ತು. ರಮೇಶ್ ಜಾರಕಿಹೊಳಿಯವರನ್ನ ಭೇಟಿ ಮಾಡಿ ವಿಶ್ ಮಾಡಿದ್ದೆ. ನನ್ನ ಸಂಪರ್ಕದಲ್ಲಿ ಯಾವ ಅತೃಪ್ತರೂ ಸಿಕ್ಕಿಲ್ಲ. ಪಾರ್ಟಿ ಯಾವುದೇ ಜವಾಬ್ದಾರಿ ಕೊಟ್ರೂ ನಿರ್ವಹಿಸುತ್ತೇನೆ ಎಂದ್ರು.
ನಾನು ಯಾವಾಗಲೂ ಇಂಡಿಪೆಂಡೆಂಟ್, ಯಾರಾದ್ರೂ ಸಿಕ್ಕರೆ ಮಾತ್ರ ಮಾತನಾಡಿದ್ತೇನೆ ಎಂದು ವಿಧಾನಸೌಧದಲ್ಲಿ ನೂತನ ಸಂಸದ ಉಮೇಶ್ ಜಾಧವ್ ಹೇಳಿಕೆ ನೀಡಿದ್ರು.
ನಾನು ದೆಹಲಿಯಿಂದ ಈಗ ರಾಜ್ಯಕ್ಕೆ ಬಂದಿದ್ದೇನೆ. ಪಕ್ಷ ಯಾವುದೇ ಜವಾಬ್ದಾರಿ ವಹಿಸಿದ್ರು ನಿರ್ವಹಿಸ್ತೇನೆ. ಇಂದು ಸಂಜೆ ಅವಿನಾಶ್ ಜಾಧವ್ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆ ಕಾರ್ಯಕ್ರಮದ ಪೂರ್ವ ತಯಾರಿಗಾಗಿ ವಿಧಾನಸೌಧಕ್ಕೆ ಬಂದಿದ್ದೇನೆ ಎಂದ್ರು.