Publish Date: Sun, 19 May 2019 (13:22 IST)
Updated Date: Sun, 19 May 2019 (13:24 IST)
ಚಿಂಚೋಳಿ ಬೈ ಎಲೆಕ್ಷನ್ ಮತದಾನ ಬಿರುಸಿನಿಂದ ಸಾಗಿದೆ. ಚಿಂಚೋಳಿ ಉಪ ಚುನಾವಣೆ ಮತದಾನ ಹಿನ್ನೆಲೆಯಲ್ಲಿ ಸಾಲಿನಲ್ಲಿ ನಿಂತು ಮತ ಚಲಾವಣೆ ಮಾಡಿದ್ದಾರೆ ಕಾಂಗ್ರೆಸ್ ಅಭ್ಯರ್ಥಿ ಸುಭಾಷ ರಾಠೋಡ.
ಸೇರಿ ಬಡಾ ತಾಂಡಾದ ಬೂತ್ ನ. 165 ರಲ್ಲಿ ಮತದಾನ ಮಾಡಿದ್ದಾರೆ ಸುಭಾಷ ರಾಠೋಡ ಚಿಂಚೋಳಿ ಕಾಂಗ್ರೆಸ್ ಅಭ್ಯರ್ಥಿ.
ರಾಠೋಡ ಮತ್ತು ಅವರ ಧರ್ಮಪತ್ನಿ ತಮ್ಮ ಹಕ್ಕು ಚಲಾಯಿಸಿದ್ರು.
ರಟಕಲ್ ರೇವಣಸಿದ್ದೇಶ್ವರ ದರ್ಶನದ ನಂತರ ಮತದಾನ ಮಾಡಿದ ರಾಠೋಡ್, ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಅಲೆಯಿದೆ. ಜನರ ಆಶೀರ್ವಾದ ಮಾರಿಕೊಂಡು ಹೋದ ಉಮೇಶ್ ಜಾಧವ್ ತಕ್ಕ ಪಾಠ ಕಲಿಸಲು ಮತದಾರ ತಮ್ಮನ್ನು ಬೆಂಬಲಿಸಲಿದ್ದಾರೆ ಎಂದರು.
ನಾನು ಹೊರಗಿನವನಲ್ಲ, ಇಲ್ಲಿಯೇ ಇದ್ದು ಕಳೆದ 20 ವರ್ಷಗಳಿಂದ ಕೆಲಸ ಮಾಡಿಕೊಂಡು ಬಂದಿದ್ದೇನೆ. ಆದರೆ ಬಂಜಾರ ಸಮಾಜದಲ್ಲಿ ಜಗಳ ಹಚ್ಚಿ ತನ್ನ ಸ್ವಾರ್ಥಕ್ಕಾಗಿ ಉಮೇಶ್ ಜಾಧವ್ ಬಂಜಾರ ಸಮುದಾಯವನ್ನು ಬಲಿಕೊಡುತ್ತಿದ್ದಾನೆ. ಜನ ಎಚ್ಚೆತ್ತಿದ್ದು ಅವರ ಆಟ ನಡೆಯಲ್ಲ. ತಮ್ಮ ಗೆಲುವು ನಿಶ್ಚಿತ ಅಂತ ಮತದಾನದ ನಂತರ ಸುಭಾಷ್ ರಾಠೋಡ್ ಹೇಳಿದ್ರು.